ಪ್ರಚಾರಕ್ಕೆ ಹುರುಪು ನೀಡಿ ಕಲ್ಲಟ್ರ ಮಾಹಿನ್ ಹಾಜಿಯವರ ವಾಕತ್ತೋನ್

ಕಾಸರಗೋಡು: ಯುಡಿವೈಎಫ್, ಯುಡಿಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ನೇತೃತ್ವದಲ್ಲಿ ಬೆಳಿಗ್ಗೆ ವಿದ್ಯಾನಗರ ಮೈದಾನ ಪರಿಸರದಲ್ಲಿ ನಡೆಸಿದ ವಾಕತ್ತೋನ್ ಚುನಾವಣಾ ಚಟುವಟಿಕೆಗಳಿಗೆ ಹುರುಪು ನೀಡಿತು. ಕಲ್ಲಟ್ರ ಮಾಹಿನ್ ಹಾಜಿ ಜೊತೆಯಲ್ಲೇ ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದರು.  ವ್ಯಾಯಮಕ್ಕಾಗಿ ಮೈದಾನಕ್ಕೆ ತಲುಪಿದ ವ್ಯಕ್ತಿಗಳು ಐಕ್ಯರಂಗದ ಅಭ್ಯರ್ಥಿಯನ್ನು ಸ್ವಾಗತಿಸಿದರು. ವಿದ್ಯಾನಗರ ಮೈದಾನ ನವೀಕರಣೆ ಸಹಿತದ ಕ್ರೀಡಾವಲಯಕ್ಕೆ ಅಗತ್ಯವಾದ ಹಲವಾರು ಬೇಡಿಕೆಗಳನ್ನು ಅಲ್ಲಿದ್ದವರು ಅಭ್ಯರ್ಥಿಯೊಂದಿಗೆ ಚರ್ಚಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಪಿ.ಎಂ. ಮುನೀರ್ ಹಾಜಿ, ಗೋವಿಂದನ್ ನಾಯರ್ ಸಹಿತ ಹಲವರು ಭಾಗವಹಿಸಿದರು.

You cannot copy contents of this page