ಕರ್ನಾಟಕ ಎಸ್.ಆರ್.ಟಿ.ಸಿ ಬಸ್-ಕಾರು ಢಿಕ್ಕಿ :ಪೈಕ ನಿವಾಸಿ ದಾರುಣ ಮೃತ್ಯು; ಪುತ್ರ ಗಂಭೀರ

ಬದಿಯಡ್ಕ: ಕೆಳಗಿನ ನೆಲ್ಲಿಕಟ್ಟೆಯಲ್ಲಿ ಇಂದು ಮುಂಜಾನೆ ಕರ್ನಾಟಕ ಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದು  ತಂದೆ ಸಾವನ್ನಪ್ಪಿ ಪುತ್ರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೆಳಗಿನ ನೆಲ್ಲಿಕಟ್ಟೆ ನಿವಾಸಿ ಹಾಗೂ ಹಿಂದೆ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಶಂಸುದ್ದೀನ್ ಪೈಕ (68)  ಸಾವನ್ನಪ್ಪಿದ ವ್ಯಕ್ತಿ. ಈ ಅಪಘಾತದಲ್ಲಿ  ಅವರ ಪುತ್ರ ಸಲ್ಮಾನ್ ಫಾರೀಸ್ (22) ಗಂಭೀರ ಗಾಯಗೊಂಡಿದ್ದು ಅವರನ್ನು ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಇಂದು ಬೆಳಿಗ್ಗೆ 6 ಗಂಟೆಗೆ ವಿದ್ಯಾನಗರ-ಬದಿಯಡ್ಕ ಠಾಣೆಯ ಗಡಿಪ್ರದೇಶವಾದ ಕೆಳಗಿನ ನೆಲ್ಲಿಕಟ್ಟೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಶಂಸುದ್ದೀನ್ ಮತ್ತು ಪುತ್ರ ಕಾರಿನಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ಕಾಸರಗೋಡಿನಿಂದ ಪುತ್ತೂರಿಗೆ ಹೋಗುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಶಂಸುದ್ದೀನ್ ಹಾಗೂ ಪುತ್ರನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಶಂಸುದ್ದೀನ್‌ರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಮೂಲತಃ ಪೈಕ ನಿವಾಸಿಯಾಗಿರುವ ಶಂಸುದ್ದೀನ್ ವರ್ಷಗಳ ಹಿಂದೆ ತಮ್ಮ ವಾಸವನ್ನು ನೆಲ್ಲಿಕಟ್ಟೆಗೆ ಬದಲಿಸಿ ಅಲ್ಲಿ ಖಾಯಂ ಆಗಿ ವಾಸವಾಗಿದ್ದರು.

ಮೃತರು ಪತ್ನಿ ರಹೀಮ, ಇತರ ಮಕ್ಕಳಾದ ರಾಶಿದ್, ಅರಾಫತ್, ಸಹದ್, ಫಾತಿಮ, ಸೊಸೆ ರಹೀಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page