ಕೊಯಿಪಾಡಿ ಪುನರ್‌ಗೇಹಂ ವಸತಿ ಸಮುಚ್ಚಯ: ಮೊದಲ ಬ್ಲೋಕ್‌ನ ಕೀಲಿಕೈ ಹಸ್ತಾಂತರ ಮಾರ್ಚ್ 4ರಂದು

ಕುಂಬಳೆ: ತೀರ ನಿವಾಸಿಗಳಿಗಾಗಿ ರಾಜ್ಯ ಸರಕಾರ ಜ್ಯಾರಿಗೊಳಿಸುವ ಪುನರ್‌ಗೇಹಂ ಯೋಜನೆ ಯಂಗವಾಗಿ ಕೊಯಿಪಾಡಿಯಲ್ಲಿ ನಿರ್ಮಿಸಿದ ವಸತಿ ಸಮುಚ್ಚಯದ ಮೊದಲ ಬ್ಲೋಕ್‌ನ ಕೀಲಿಕೈ ಹಸ್ತಾಂತರ ಮಾರ್ಚ್ 4ರಂದು ಫಿಶರೀಸ್ ಇಲಾಖೆ ಸಚಿವ ಸಜಿ ಚೆರಿಯಾನ್ ನಿರ್ವಹಿಸುವರು.  ಸಮುದ್ರಕೊರೆತ ಬೆದರಿಕೆ ಎದುರಿಸುವ ಮೀನು ಕಾರ್ಮಿಕರ ಕುಟುಂಬ ಗಳಿಗೆ ಸುರಕ್ಷಿತವಾದ ಹಾಗೂ ಶಾಶ್ವತವಾದ ವಾಸ ಸ್ಥಳ ಖಚಿತಗೊಳಿ ಸುವುದು ಎಂಬ ಉದ್ದೇಶದೊಂದಿಗೆ ಜ್ಯಾರಿಗೊಳಿಸುವ ಯೋಜನೆಯಾಗಿದೆ ಪುನರ್‌ಗೇಹಂ. ಕುಂಬಳೆ ಪಂಚಾಯತ್‌ನ ಕೊಪಾಡಿಯಲ್ಲಿ 1.96 ಎಕ್ರೆ ಸ್ಥಳದಲ್ಲಿ ಐದು ಬ್ಲೋಕ್‌ಗಳಲ್ಲಾಗಿ ಒಟ್ಟು 120 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ನಿರ್ಮಾಣ ಪೂರ್ತಿಗೊಂಡ ಒಂದನೇ ಬ್ಲೋಕ್ 24 ಫಲಾನುಭವಿಗ ಳಿಗಾಗಿ ನೀಡಲಾಗವುದು. ಉಳಿದ ನಾಲ್ಕು ಬ್ಲೋಕ್‌ಗಳ ನಿರ್ಮಾಣ ಚಟುವಟಿಕೆಗಳು ಪ್ರಗತಿಯಲ್ಲಿದೆ ಎಂದು ಅವುಗಳನ್ನು ಕೂಡಾ ಶೀಘ್ರವೇ ಹಸ್ತಾಂತರಿಸಲಾ ಗುವುದೆಂದು ಫಿಶರೀಸ್ ಡೆಪ್ಯುಟಿ ಡೈರೆಕ್ಟರ್ ಕೆ.ಎ. ಲಬೀಬ್ ತಿಳಿಸಿದ್ದಾರೆ.

ಪುನರ್‌ಗೇಹಂ ಯೋಜನೆಯ ಹಾಗೂ ಲೈಫ್ ಮಿಷನ್‌ನ ಭೂರಹಿತ, ಭವನರಹಿತ ಮೀನು ಕಾರ್ಮಿಕರಿಂದ ಚೀಟಿ ಎತ್ತುವ ಮೂಲಕ ಆಯ್ಕೆಯಾದ 120 ಮಂದಿಯನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಫಿಶರೀಸ್ ಇಲಾಖೆಯ ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಭಾಗವಹಿಸುವರು.

ಯೋಜನೆಗಿರುವ ಫಲಾನುಭವಿ ಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಚೀಟಿ ಎತ್ತುವಿಕೆಯಲ್ಲಿ ಆಯ್ಕೆ ಮಾಡಲಾಗಿದೆ.

You cannot copy contents of this page