ಸಜಿಪ ಕುಡೂರು ತರವಾಡಿನಲ್ಲಿ ಕೃಷ್ಣ ಕಾರ್ನವರ್ ಸಹಿತ ಹಿರಿಯರಿಗೆ ಸನ್ಮಾನ

ಉಪ್ಪಳ: ತೆನೆಕುಡಿಯ [ಸಾಲಿಯಾನ್] ಕುಟುಂಬಸ್ಥರ ವಯನಾಡು ಕುಲವನ್ ವಿಷ್ಣು ಮೂರ್ತಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಸಜಿಪ ಕುಡೂರು ಇದರ ಮಾರ್ಗದರ್ಶಕ, ಶಿರಿಯ ಮಾವಿನಡಿ ಕೊಪ್ಪಳ ತರವಾಡು ಅಡ್ಕ ಶ್ರೀ ಭಗವತೀ ಕ್ಷೇತ್ರದ ಕೃಷ್ಣ ಕಾರ್ನ ವರ್‌ರಿಗೆ ಗೌರವರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಅಡ್ಕ ಶ್ರೀ ಭಗವತೀ ಕ್ಷೇತ್ರದ ಪುಲ್ಲೂರಾಳಿ ತಂಬುರಾಟಿ ಪಾತ್ರಿ ಮೋನಪ್ಪ ಬೆಳ್ಚಪ್ಪಾಡ, ತರವಾಡಿನ ಹಿರಿಯ ಕೊಗ್ಗು ಬೆಳ್ಚಾಡ ಇವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ತರವಾಡಿನ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಉಪ್ಪಳ ಶ್ರೀ ಭಗವತೀ ಕ್ಷೇತ್ರ, ಅಡ್ಕ ಕ್ಷೇತ್ರ, ಕುದ್ರೊಳಿ ಕ್ಷೇತ್ರ, ಬೊಳ್ನಾಡು ಕ್ಷೇತ್ರಗಳ ಆಚಾರ ಪಟ್ಟವರು, ಗುರಿಕ್ಕಾರರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

You cannot copy contents of this page