ಮುಳ್ಳೇರಿಯ: ಚಿರತೆ ಬಾವಿಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಚಿರತೆಯೊಂದು ಬಾವಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮುಳ್ಳೇರಿಯ ಸಮೀಪದ ಪೆರಿಯಡ್ಕದ ಆನಂದನ್ ಎಂಬವರ ಮನೆ ಬಳಿಯ ಬಾವಿಯಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಚಿರತೆ ಬಾವಿಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ಬಗ್ಗೆ ಮಾಹಿತಿ ಲಭಿಸಿದ ಅರಣ್ಯಪಾಲ ಕರು ಹಾಗೂ ಆರ್‌ಆರ್‌ಟಿ ತಂಡ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಹಾಯದೊಂದಿಗೆ ಚಿರತೆಯನ್ನು ನಿನ್ನೆ ರಾತ್ರಿವೇಳೆ ಬಾವಿಯಿಂದ ಮೇಲಕ್ಕೆತ್ತಿದು. ನಂತರ ಅದನ್ನು ಅರಣ್ಯ ಇಲಾಖೆ ಕಚೇರಿಗೆ ಸಾಗಿಸಲಾಯಿತು.

ಕಾರಡ್ಕ ಅರಣ್ಯವಲಯದಲ್ಲಿ ಹಲವು ದಿನಗಳ ಹಿಂದೆಯೇ ಚಿರತೆ ಗೋಚರಿಸಿತ್ತು. ಅದು ಈ ಪ್ರದೇಶದ ಜನರಲ್ಲಿ ಭೀತಿ ಆವರಿಸುವಂತೆ ಮಾಡಿತ್ತು. ಚಿರತೆಯ್ನು ಸೆರೆಹಿಡಿಯಲು ಅರಣ್ಯಪಾಲಕರು ಹಲವೆಡೆಗಳಲ್ಲಾಗಿ ಕುಣಿಕೆಗಳನ್ನು ಇರಿಸಿದ್ದರು.  ಈಮಧ್ಯೆ ನಿನ್ನೆ ಪೆರಿಯಡ್ಕದ ಬಾವಿಯಲ್ಲಿ ಸತ್ತ ಸ್ಥಿತಿಯಲ್ಲಿ ಚಿರತೆ ಪತ್ತೆಯಾಗಿದೆ. ಇದು ಶನಿವಾರ ರಾತ್ರಿ ಬಾವಿಗೆ ಬಿದ್ದಿರಬಹದೆಂದು ಶಂಕಿಸಲಾಗುತ್ತಿದೆ.

You cannot copy contents of this page