ಅದ್ರುಕುಳಿಯಿಂದ ನಾಪತ್ತೆಯಾದ ಯುವತಿ ಪತ್ತೆಗಾಗಿ ಲುಕೌಟ್ ನೋಟೀಸ್

ಕಾಸರಗೋಡು: ಚೆರ್ಕಳ ಪಾಡಿ ಅದ್ರುಕುಳಿಯಿಂದ ನಾಪತ್ತೆಯಾದ ಯುವತಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇದರಂಗವಾಗಿ ವಿದ್ಯಾನಗರ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದಾರೆ. ಅದ್ರುಕುಳಿಯ ವಿನಯನ್ ಎಂಬವರ ಪತ್ನಿ ಲಕ್ಷ್ಮಿ(39)ಯ ಪತ್ತೆಗಾಗಿ ಲುಕೌಟ್ ನೋಟೀಸ್ ಹೊರಡಿಸಲಾಗಿದೆ.

ಕಳೆದ ಅಕ್ಟೋಬರ್ 25ರಂದು ಬೆಳಿಗ್ಗೆ ಮನೆಯಿಂದ ಹೋದ ಲಕ್ಷ್ಮಿ ಮರಳಿ ಬಂದಿಲ್ಲವೆಂದು ದೂರಲಾಗಿದೆ. ವಿದ್ಯಾನಗರ ಎಸ್‌ಐ ವಿಜಯನ್ ಮೇಲತ್‌ರ ನೇತೃತ್ವದಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆಯಾದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಾಯ ಯಾಚಿಸಿ  ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದಾರೆ.

You cannot copy contents of this page