ಮಧೂರು ಪಂಚಾಯತನ್ನು ಸ್ಮಾರ್ಟ್ ಆಗಿ ಅಭಿವೃದ್ಧಿಪಡಿಸಲಾಗುವುದು- ಎಂ.ಎಲ್. ಅಶ್ವಿನಿ

ಕಾಸರಗೋಡು: ಈ ಬಾರಿಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮಧೂರು ಪಂಚಾಯತ್‌ನಲ್ಲಿ ಬಿಜೆಪಿ ಹೆಚ್ಚಿನ ಬಹುಮತದೊಂದಿಗೆ ಅದಿsಕಾರಕ್ಕೆ ಬರಲಿದ್ದು, ಮುಂದಿನ ಐದು ವರ್ಷಗಳಲ್ಲಿ ಮಧೂರು ಪಂಚಾಯತ್ ಸ್ಮಾರ್ಟ್ ಮಧೂರು ಆಗಿ ಅಭಿವೃದ್ಧಿ ಹೊಂದಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದ್ದಾರೆ. ಮಧೂರು ಪಂಚಾಯತ್‌ನ ಬಿಜೆಪಿ ಅಭ್ಯರ್ಥಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂ.ನಲ್ಲಿ 50ನೇ ವಾರ್ಷಿಕೋ ತ್ಸವಕ್ಕೆ ಕಾಲಿಡುತ್ತಿರುವ ಬಿಜೆಪಿಯು ಅಪ್ರತಿಮ ಸಾಧನೆಗಳನ್ನು ಸಾದಿsಸಿದೆ. ಮುಂದಿನ ಐದು ವರ್ಷಗಳಲ್ಲಿ ಪಂಚಾಯತ್‌ನ ಎಲ್ಲಾ ವಾರ್ಡ್ ಗಳಲ್ಲೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅಶ್ವಿನಿ ತಿಳಿಸಿದರು.
ಬಿಜೆಪಿ ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ ಕುದ್ರೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್, ಮಧೂರು ಪಂಚಾಯತ್ ಪಶ್ಚಿಮ ವಲಯ ಸಮಿತಿಯ ಅಧ್ಯಕ್ಷ ಮಾಧವ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಮೀಪುಗುರಿ, ಮಧೂರು ಪಂಚಾಯತ್ ಪೂರ್ವ ವಲಯ ಸಮಿತಿಯ ಅಧ್ಯಕ್ಷ ರವಿ ಗಟ್ಟಿ, ಮಧೂರು ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ , ಮುರಳಿ ಮಧೂರು, ಶಶಿಕುಮಾರ್ ಮನ್ನಿಪ್ಪಾಡಿ ಮಾತನಾಡಿದರು.

RELATED NEWS

You cannot copy contents of this page