ಉಪ್ಪಳ: ಬಾಯಾರು ಬಳಿಯ ಸಂಬಂಧಿಕರ ಮನೆಗೆ ತೆರಳಿದ ಮುಜುಂಗಾವು ನಿವಾಸಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಯಿಪ್ಪಾಡಿ ಗ್ರಾಮದ ಮುಜುಂಗಾವು ಕಾವಿ ಕನ್ನಿಮೂಲ ನಿವಾಸಿ ನಾರಾಯಣ ಎಂಬವರ ಪುತ್ರ ಈಶ್ವರ ಎಂ (42) ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಇವರ ಪತ್ನಿ ಮೋಹಿನಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಾಯಾರು ಬಳಿಯ ಪೆಲ್ತಡ್ಕದಲ್ಲಿರುವ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ಈಶ್ವರ ಈ ತಿಂಗಳ 1ರಂದು ಅಲ್ಲಿಗೆ ತೆರಳಿದ್ದರು. ೫ರಂದು ಸಂಜೆ ಅಲ್ಲಿಂದ ನಾಪತ್ತೆಯಾಗಿದ್ದಾರೆ. ವಿವಿಧೆಡೆ ಹುಡುಕಿದರೂ ಪತ್ತೆಹಚ್ಚಲಾಗಲಿಲ್ಲ ವೆಂದು ಪತ್ನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.






