ಉಪ್ಪಳ: ಆರು ತಿಂಗಳ ಹಿಂದೆ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಯುವಕನನ್ನು ಪೊಲೀಸರು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಯಿತು. ಮಂಗಲ್ಪಾಡಿ ಸೋಂಕಾಲು ಪ್ರತಾಪನಗರದ ಶಿವಾನಂದ ಎಂಬವರ ಪುತ್ರ ಕೃಪೇಶ್ (23) ರನ್ನು ಕರ್ನಾಟಕದ ಶಿವಮೊಗ್ಗ ಬಳಿಯ ಕಳಸದಿಂದ ಪತ್ತೆಹಚ್ಚಲಾಗಿದೆ. ಹೈಕೋ ರ್ಟ್‌ನ ನಿರ್ದೇಶ ಪ್ರಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿಯವರ ನೇತೃತ್ವದಲ್ಲಿ ರೂಪೀಕರಿಸಿದ ಸ್ಪೆಶಲ್ ಸ್ಕ್ವಾಡ್ ನಡೆಸಿದ ಕಾರ್ಯಾ ಚರಣೆಯಲ್ಲಿ ಕೃಪೇಶ್‌ರನ್ನು ಪತ್ತೆಹಚ್ಚಲಾ ಗಿದೆ. ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸರಾದ ದಿನೇಶ್, ಮನು, ಚಂದ್ರ ಕಾಂತ್, ಸಂದೀಪ್ ಎಂಬಿವರು ಕಾರ್ಯಾ ಚರಣೆ ನಡೆಸಿದ ಸ್ಕ್ವಾಡ್‌ನಲ್ಲಿದ್ದರು.
ಉಪ್ಪಳದ ಕೆ.ಎಂ. ಸೂಪರ್ ಮಾರ್ಕೆಟ್‌ನಲ್ಲಿ ನೌಕರನಾಗಿದ್ದ ಕೃಪೇಶ್ ೨೦೨೫ ಸೆಪ್ಟಂಬರ್ ೨೫ರಂದು ಬೆಳಿಗ್ಗೆ ೧೦ ಗಂಟೆ ವೇಳೆ ನಾಪತ್ತೆಯಾಗಿದ್ದರು. ಅಂಗಡಿಯಿಂದ ಮೆಡಿಕಲ್ ಶಾಪ್‌ಗೆಂದು ತಿಳಿಸಿ ಹೋದ ಬಳಿಕ ಕೃಪೇಶ್ ಮರಳಿ ಬಂದಿರಲಿಲ್ಲ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಒಂದು ವಾಹನ ಅಪಘಾತಕ್ಕೆ ಸಂಬಂಧಿಸಿ ಕೃಪೇಶ್ ೧೦ ಸಾವಿರ ರೂಪಾಯಿ ನೀಡ ಬೇಕಾಗಿತ್ತೆನ್ನಲಾ ಗಿದೆ. ಆದರೆ ಹಣ ನೀಡಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಕೃಪೇಶ್ ನಾಪತ್ತೆಯಾಗಿದ್ದರು. ಪೊಲೀಸರು ಕರ್ನಾಟಕ, ಆಂಧ್ರ ಸಹಿತ ವಿವಿಧೆಡೆ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.ಈ ಮಧ್ಯೆ ಮಗನಿಗೆ ಬೆದರಿಕೆ ಇತ್ತೆಂದೂ ಆದ್ದರಿಂದ ಆತನನ್ನು ಯಾರಾದರೂ ಅಪಹರಿಸಿರಬಹುದೆಂದು ತಿಳಿಸಿ ತಾಯಿ ಗೀತ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇದರಂತೆ ಹೈಕೋರ್ಟ್‌ನ ನಿರ್ದೇಶ ಪ್ರಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತ್ಯೇಕ ತನಿಖಾ ತಂಡವನ್ನು ರೂಪೀಕರಿಸಿದ್ದರು. ನಾಪತ್ತೆಯಾದ ಬಳಿಕ ಕೃಪೇಶ್ ಮೊಬೈಲ್ ಫೋನ್ ಉಪ ಯೋಗಿಸಿರಲಿಲ್ಲ. ಈ ಮಧ್ಯೆ ಬೇರೊಬ್ಬರ ಫೋನ್‌ನಿಂದ ತನ್ನ ಫೇಸ್ ಬುಕ್ ಖಾತೆ ತೆರೆದಿರುವುದು ತನಿಖಾ ತಂಡದ ಗಮನಕ್ಕೆ ಬಂದಿದ್ದು ಇದು ಕೃಪೇಶ್‌ರ ಕುರಿತು ಮಾಹಿತಿ ಲಭಿಸಲು ಸಹಾಯಕವಾಯಿತು. ಕೃಪೇಶ್ ಕರ್ನಾಟಕದ ಶಿವಮೊಗ್ಗದ ಲ್ಲಿರುವುದಾಗಿ ದೃಢೀಕರಿಸಿದ ಪೊಲೀಸರು ಅಲ್ಲಿಗೆ ತಲುಪಿ ನಡೆಸಿದ ತನಿಖೆ ವೇಳೆ ಕೃಪೇಶ್ ಕಾಂಕ್ರೀಟ್ ಕೆಲಸ ನಡೆಸುತ್ತಿರು ವುದು ತಿಳಿದುಬಂದಿದೆ. ಇದರಿಂದ ಕೆಲಸದ ಮೇಸ್ತ್ರಿಯನ್ನು ಪತ್ತೆಹಚ್ಚಿ ಕೃಪೇಶ್‌ನ ಕುರಿತು ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ. ಈಮಧ್ಯೆ ತನ್ನನ್ನು ಹುಡುಕಿ ಪೊಲೀಸರು ತಲುಪಿದ್ದಾರೆಂದು ಮಾಹಿತಿ ಲಭಿಸಿದ ಕೃಪೇಶ್ ಅಲ್ಲಿಂದಲೂ ಪರಾರಿಯಾ ಗಲೆತ್ನಿಸು ತ್ತಿದ್ದ ವೇಳೆ ಆತನನ್ನು ಕಸ್ಟಡಿಗೆ ತೆಗೆದುಕೊಂ ಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






