ಕಾಸರಗೋಡು: ಮೊಗ್ರಾಲ್ ಪುತ್ತೂರು ಅರಫನಗರದಿಂದ ನಾಪತ್ತೆಯಾದ ಯುವಕ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅರಫನಗರದ ಮಾಹಿನ್ (45) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಆದಿತ್ಯವಾರ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಸಂಬಂಧಿಕರು, ನಾಗರಿಕರು, ಪೊಲೀಸರು ಸೇರಿ ಹುಡುಕಾಡುತ್ತಿದ್ದ ವೇಳೆ ಸೋಮವಾರ ಸಂಜೆ ಅರಫನಗರದ ಸಾರ್ವಜನಿಕ ಬಾವಿಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರ ಣೋತ್ತರ ಪರೀಕ್ಷೆ ನಡೆಸಲಾಯಿತು. ಅನಂತರ ಮನೆಗೆ ತಲುಪಿಸಿ ಮೊಗ್ರಾಲ್ ಪುತ್ತೂರು ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಅರಫನಗರದ ಶಾಫಿ- ಬೀವಿ ದಂಪತಿ ಪುತ್ರನಾದ ಮೃತರು ಪತ್ನಿ ಮೈಮೂನ, ಮಕ್ಕಳಾದ ಫಾತಿಮ, ಫರ್ಹಾನ್, ಸಹೋದರ ಅಶ್ರಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







