ಇನ್ನು ಅಬ್ಬರದ ಪ್ರಚಾರ ದಿನಗಳು: ಜಿಲ್ಲೆಯಲ್ಲಿ 32 ಮಂದಿ ಸೇರಿದಂತೆ ರಾಜ್ಯದಲ್ಲಿ 890 ಅಭ್ಯರ್ಥಿಗಳು

ಕಾಸರಗೋಡು: ಕೇರಳ ವಿಧಾನ ಸಭೆಗೆ ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ಗಳನ್ನು ಹಿಂಪಡೆಯುವ ಪ್ರಕ್ರಿಯೆಗಳು ನಿನ್ನೆ ಪೂರ್ಣಗೊಂಡಿರುವಂತೆಯೇ ಅಂತಿಮ ಚುನಾವಣಾ ಕಣದಲ್ಲಿ  ಕಾಸರ ಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 32 ಅಭ್ಯರ್ಥಿಗಳಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಒಟ್ಟು 140 ವಿಧಾನಸಭಾ  ಕ್ಷೇತ್ರದಲ್ಲಿ 890 ಮಂದಿ ಉಳಿದುಕೊಂಡಿದ್ದಾರೆ.

ಈಬಾರಿ ಒಟ್ಟು 1254 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಬಳಿಕ ರಾಜ್ಯದಲ್ಲಿ ೯೮೫ ಮಂದಿ ಅಭ್ಯರ್ಥಿಗಳು ಉಳಿದುಕೊಂಡಿದ್ದರು. ಇದರಲ್ಲಿ 95 ಮಂದಿ ನಿನ್ನೆ ತಮ್ಮ ನಾಮಪತ್ರಗಳನ್ನು ಹಿಂಪಡೆದು ಕೊಂಡಿದ್ದು, ಆ ಮೂಲಕ ಅಂತಿಮ ಚುನಾವಣಾ ಕಣದಲ್ಲಿ ಈಗ 890 ಮಂದಿ ಉಳಿದುಕೊಂಡಿದ್ದಾರೆ.

2021ರ ವಿಧಾನಸಭಾ ಚುನಾವಣೆ ಯಲ್ಲಿ ಒಟ್ಟು 957 ಮಂದಿ ಅಂತಿಮ ಚುನಾವಣಾ ಕಣದಲ್ಲಿದ್ದರು. ಅದ ರೊಂದಿಗೆ ಹೋಲಿಸಿದಾಗ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಈ ಬಾರಿ 67ರಷ್ಟು ಕುಸಿತವುಂಟಾಗಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ತಿರುವನಂತಪುರ ಜಿಲ್ಲೆಯಲ್ಲಿ ೧೦೫ ಮಂದಿ ಅಂತಿಮ ಸ್ಪರ್ಧಾ ಕಣದಲ್ಲಿ ದ್ದಾರೆ. ಉಳಿದಂತೆ ಅನುಕ್ರಮವಾಗಿ ಕಲ್ಲಿಕೋಟೆ 102, ಮಲಪ್ಪುರಂ 96, ಎರ್ನಾಕುಳಂ 87, ತೃಶರು 78, ಕಣ್ಣೂರು 78, ಪಾಲಕ್ಕಾಡ್ 70, ಕೊಲ್ಲಂ 60, ಆಲಪ್ಪುಳ 49, ಕಾಸರಗೋಡು 32, ಇಡುಕ್ಕಿ 27, ಪತ್ತನಂ ತಿಟ್ಟ 25 ಮತ್ತು ವಯನಾಡು ಜಿಲ್ಲೆಯಲ್ಲಿ 21 ಅಭ್ಯರ್ಥಿಗಳು ಅಂತಿಮ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.

ಅಂತಿಮ ಮತದಾರರ ಪಟ್ಟಿ

ಯಲ್ಲಿ ರಾಜ್ಯದಲ್ಲಿ ಒಟ್ಟಾರೆಯಾಗಿ 2,71,42,952 ಮತದಾರರಿದ್ದಾರೆ. ಕೇರಳದಲ್ಲಿ ಯಾವ ರಾಜಕೀಯ   ಒಕ್ಕೂಟ ಅಧಿಕಾರಕ್ಕೇರಬೇಕೆನ್ನು ವುದನ್ನು ಇವರು ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ನಿರ್ಣಯಿ ಸಲಿದ್ದಾರೆ.

You cannot copy contents of this page