ಮಗಳ ಮನೆಯಲ್ಲಿ ತಾಯಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಕೊಯಿಪ್ಪಾಡಿಯಲ್ಲಿ ರುವ ಮಗಳ ಮನೆಗೆ ಬಂದಿದ್ದ ತಾಯಿ ಕುಸಿದು ಬಿದ್ದ್ದು ಮೃತಪಟ್ಟ ಘಟನೆ ನಡೆದಿದೆ.

ಪಳಯಂಗಾಡಿ ನಿವಾಸಿ ಬಾಲಕೃಷ್ಣನ್ ಎಂಬವರ ಪತ್ನಿ ಶಾಂತ (68) ಮೃತಪಟ್ಟವರು. ನಿನ್ನೆ ಬೆಳಿಗ್ಗೆ  ಕೊಯಿಪ್ಪಾಡಿಯಲ್ಲಿರುವ  ಮಗಳು ಬಬಿತರ ಮನೆಯಲ್ಲಿ ಶಾಂತ ಕುಸಿದುಬಿದ್ದಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು. 

ಮೃತರು ಇತರ ಮಕ್ಕಳಾದ  ಮನೋಜ್, ಮಹೇಶ್, ಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page