ಕಾಸರಗೋಡು: ವಂದೇ ಭಾರತ್ ರೈಲಿನಲ್ಲಿ ದೇಶಭಕ್ತಿ ಗಾನಾಲಾಪನೆಯನ್ನು ವಿವಾದ ಮಾಡುತ್ತಿರುವವರು ಭಾರತ ಮಾತೆ ಎಂಬ ಸಂಕಲ್ಪವನ್ನು ಅರಗಿಸಿಕೊಳ್ಳಲು ಸಾಧ್ಯವಾಗದವರಾಗಿ ದ್ದಾರೆಂದು, ಈ ಮೊದಲು ಭಾರತಮಾತೆಯ ಛಾಯಾಚಿತ್ರದ ಮುಂದೆ ಪುಷ್ಪಾರ್ಚನೆಯನ್ನು ವಿವಾದಗೊಳಿಸಿರುವುದು ಇದೇ ಗುಂಪು ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ನುಡಿದರು. ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರ ಜ್ಯಾರಿಗೊಳಿಸುವ ಮಹಿಳಾ ಕಲ್ಯಾಣ ಯೋಜನೆಗಳ ಪಿತೃತ್ವವನ್ನು ವಹಿಸಿಕೊಳ್ಳಲು ಮಾತ್ರವೇ ಪಿಣರಾಯಿ ವಿಜಯನ್ ಸರಕಾರ ಯತ್ನಿಸುತ್ತಿರುವುದು. ಕಳೆದ ಒಂದು ವಾರದಲ್ಲಿ ನಡೆದ ಎರಡು ಘಟನೆಗಳು ಕೇರಳದ ಮಹಿಳಾ ಸಮೂಹ ಸುರಕ್ಷಿತವೆಂಬ ರಾಜ್ಯ ಸರಕಾರದ ಹಕ್ಕುವಾದ ಪೊಳ್ಳು ಎಂದು ದೃಢೀಕರಿಸುವುದಾಗಿ ಎಂದು ನವ್ಯಾ ಅಭಿಪ್ರಾಯಪಟ್ಟರು.
ಮಹಿಳಾಮೋರ್ಚಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ರಮಣಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯರಾದ ಸತೀಶ್ಚಂದ್ರ ಭಂಡಾರಿ, ಸವಿತಾ ಟೀಚರ್, ಜಿಲ್ಲಾ ಉಪಾಧ್ಯಕ್ಷೆ ಎಚ್.ಆರ್. ಸುಕನ್ಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಜಿಲ್ಲಾ ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯ ದರ್ಶಿಗಳಾದ ಪ್ರೇಮಲತಾ ಎಸ್, ಅನಿತಾ ನಾಯಕ್ ಮಾತನಾಡಿದರು.







