ಕುಂಬಳೆ: ಬಿಜೆಪಿ ಮುಖಂಡ ಹಾಗೂ ಉದ್ಯಮಿ ಆಗಿರುವ ಕುಂಬಳೆಯ ವಿಕ್ರಮ್ ಪೈ ವಿರುದ್ಧ ಕೊಲೆ ಯತ್ನ ಘಟನೆ ನಡೆದಿದೆ. ವಿಕ್ರಮ್ ಪೈಯ ಪೊಸತ್ತಡ್ಕದಲ್ಲಿರುವ ಆಗ್ರೋ ಡೈರಿ ಫಾರ್ಮ್‌ಗಿರುವ ಕಾಂಕ್ರೀಟ್ ರಸ್ತೆಯಲ್ಲಿ ಸಂಭವಿಸಿದ ಸ್ಫೋಟದಿಂದ ಕಾರಿಗೆ ಹಾನಿಯುಂಟಾಗಿದೆ. ಟಯರ್ ನಾಶವಾಗಿದೆ. ಕಾರಿನ ಅಡಿ ಭಾಗ ನಜ್ಜುಗುಜ್ಜಾಗಿದೆ.
ಬೆಳಿಗ್ಗೆ ಮನೆಯಿಂದ ಫಾರ್ಮ್‌ಗಿರುವ ಪ್ರಯಾಣ ಮಧ್ಯೆ ಫಾರ್ಮ್‌ನ ಬಳಿಗೆ ತಲುಪುವಾಗ ಕಾರಿನ ಚಕ್ರ ಹತ್ತಿದಾಗ ಸ್ಫೋಟ ಸಂಭವಿ ಸಿರುವುದಾಗಿ ಹೇಳಲಾಗುತ್ತಿದೆ. ಅತ್ಯುಘ್ರ ಶಬ್ದದಿಂದ ಒಡಗೂಡಿ ಸ್ಫೋಟ ಸಂಭವಿಸಿದ್ದು, ಪರಿಸರವಾಸಿಗಳು ಓಡಿ ಬಂದಾಗ ಬೆಂಕಿ ಹಿಡಿದು ಹೊತ್ತುತ್ತಿರುವುದು ಕಂಡು ಬಂದಿದೆ. ಕಾರಿನ ಟಯರ್ ಸಿಡಿದು ಕಾರು ಎತ್ತರಕ್ಕೆ ಹಾರಿ ಬಳಿಕ ನಿಂತಿದೆ. ಆದರೆ ಅದೃಷ್ಟವಶಾತ್ ವಿಕ್ರಮ್ ಪೈ ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ತಲುಪಿದರು. ಪ್ರಾಥಮಿಕ ತನಿಖೆಯಲ್ಲಿ ಇದು ಹಂದಿಯನ್ನು ಕೊಲ್ಲರಿಸಿದ ಪಟಾಕಿಯಾಗಿರ ಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಂದಿಯನ್ನು ಕೊಲ್ಲಲು ಇರಿಸಿದ್ದ ಪಟಾಕಿಯಾಗಿದ್ದರೂ ಕುಂಬಳೆ- ಬದಿಯಡ್ಕ ರಸ್ತೆಯಿಂದ ಆಗ್ರೋ ಫಾರ್ಮ್‌ಗಿರುವ ಖಾಸಗಿ ರಸ್ತೆಯಲ್ಲಿ ಅದು ಹೇಗೆ ತಲುಪಿತ್ತು ಎಂಬ ಬಗ್ಗೆ ಪ್ರಶ್ನೆ ಬಾಕಿ ಉಳಿದಿದೆ. ಮಾತ್ರವಲ್ಲ ಕಾಂಕ್ರೀಟ್ ರಸ್ತೆ ಹಾಗೂ ಲೈಟ್ ಉರಿಯುವ ಈ ಸ್ಥಳದಲ್ಲಿ ಸಾಮಾನ್ಯವಾಗಿ ಸಂಚರಿಸಲು ಸಾಧ್ಯವಿಲ್ಲ. ಇಲ್ಲಿ ಇರಿಸಿರುವ ಕಾರಣವೂ ನಿಗೂಢವಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಆಗಾಗ ವಾಹನಗಳು ಸಾಗುತ್ತಿರುತ್ತವೆ.
ಪೊಸತ್ತಡ್ಕ ಪ್ರದೇಶದಲ್ಲಿ ಪ್ರಥಮವಾಗಿ ಈ ರೀತಿಯ ಘಟನೆ ಉಂಟಾಗಿದ್ದು ಇದು ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿದೆ. ಸ್ಫೋಟಕ ಸಾಮಗ್ರಿಗಳ ಅವಶಿಷ್ಟಗಳನ್ನು ವಿಕ್ರಮ್ ಪೈ ಸಂಗ್ರಹಿಸಿದ್ದಾರೆ. ಇದನ್ನು ಸ್ವಂತ ಖರ್ಚಿನಲ್ಲಿ ತಪಾಸಣೆಗೆ ಕಳುಹಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ.
ಸಾಮಾಜಿಕ ಸಮಸ್ಯೆಗಳಲ್ಲಿ, ಸಾರ್ವಜನಿಕ ಆಸಕ್ತಿ ಇರುವ ವಿಷಯಗಳಲ್ಲಿ ಸಕ್ರಿಯವಾಗಿ ವಿಕ್ರಮ್ ಪೈ ಮಧ್ಯೆ ಪ್ರವೇಶಿಸುತ್ತಿದ್ದು, ಇದಕ್ಕೆ ಕೆಲವು ವಲಯಗಳಿಂದ ಇತ್ತೀಚೆಗೆ ವಿರೋಧಗಳು ಉಂಟಾಗಿರುವು ದಾಗಿಯೂ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.






