25 ಕ್ಷೇತ್ರಗಳಲ್ಲಿ ಮುಸ್ಲಿಂಲೀಗ್ ಸ್ಪರ್ಧೆ: ಕಾಸರಗೋಡಿನಲ್ಲಿ ಕಲ್ಲಟ್ರ ಮಾಹಿನ್ ಹಾಜಿ

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದ ಯುಡಿಎಫ್ (ಮುಸ್ಲಿಂ ಲೀಗ್)ನ ಅಭ್ಯರ್ಥಿಯಾಗಿ ಯುಡಿಎಫ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿಯವರನ್ನು ಮುಸ್ಲಿಂಲೀಗ್ ಕಣಕ್ಕಿಳಿಸಿದೆ. ಇವರು ಕಳೆದ ಐವತ್ತು ವರ್ಷಗಳಿಂದ ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಇವರು ಮುಸ್ಲಿಂ ಲೀಗ್‌ನ ಜಿಲ್ಲಾ ಉಪಾಧ್ಯಕ್ಷ, ಕೋಶಾಧಿಕಾರಿ ಇತ್ಯಾದಿ ಸ್ಥಾನಗಳನ್ನು ವಹಿಸಿದ್ದರು. ಇವರು ಮೇಲ್ಪರಂಬ ಕಟ್ಟೆಕ್ಕಾಲ್ ನಿವಾಸಿಯಾಗಿದ್ದಾರೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ (ಮುಸ್ಲಿಂ ಲೀಗ್) ಅಭ್ಯರ್ಥಿಯಾಗಿ ಹಾಲಿ ಶಾಸಕ ಎಕೆಎಂ ಅಶ್ರಫ್‌ರ ಹೆಸರನ್ನು ಮುಸ್ಲಿಂಲೀಗ್ ಪ್ರಕಟಿಸಿದೆ.

ರಾಜ್ಯದಲ್ಲಿ ಒಟ್ಟಾರೆಯಾಗಿ ಮುಸ್ಲಿಂಲೀಗ್ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಹೀಗೆ ಸ್ಪರ್ಧಿಸುವ ಅಭ್ಯರ್ಥಿಗಳ ಯಾದಿಯನ್ನು ಮುಸ್ಲಿಂ ಲೀಗ್ ರಾಜ್ಯ ಘಟಕ ನಿನ್ನೆ ವಿದ್ಯುಕ್ತವಾಗಿ ಘೋಷಿಸಿದೆ.

RELATED NEWS

You cannot copy contents of this page