ಹೊಸ ವರ್ಷಾಚರಣೆ : ಪೊಲೀಸರಿಂದ ಕಠಿಣ ನಿರ್ದೇಶ

ಕಾಸರಗೋಡು: ಹೊಸ ವರ್ಷಾಚರಣೆ ಅತಿರೇಖಕ್ಕೆ ಹೋಗದಿರುವಂತೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಆಚರಣೆಗಳು ಯಾವ ವಿಧದಲ್ಲಿರಬೇಕೆಂಬ ಬಗ್ಗೆ ಪೊಲೀಸರು ರಾಜ್ಯಮಟ್ಟದಲ್ಲಿಯೇ ರೂಪುರೇಷೆ ಹೊರಡಿಸಿದ್ದಾರೆ. ಆಚರಣೆಯ ಮರೆಯಲ್ಲಿ ಸಮಾಜದ್ರೋಹ ಚಟುವಟಿಕೆಗಳನ್ನು ನಡೆಸಬಾರದು. ಸಾಕಷ್ಟು ಬೆಳಕು ಸೌಕರ್ಯ ಇರುವ ಸ್ಥಳಗಳಲ್ಲಿ ಮಾತ್ರವೇ ಆಚರಣೆ ನಡೆಸಬೇಕು. ಬಾರ್ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ, ಇತರ ಸಂಬಂಧಿತ ಸಂಸ್ಥೆಗಳಲ್ಲಿ, ಡಿಜೆ ಪಾರ್ಟಿಗಳನ್ನು ನಡೆಸುವಾಗ ಭಾಗವಹಿಸುವವರ ಮಾಹಿತಿಗಳನ್ನು ಮುಂದಾಗಿಯೇ ತಿಳಿಸಬೇಕು, ಕಾರ್ಯಕ್ರಮದಲ್ಲಿ ಮದ್ಯಪಾನದ ವ್ಯವಸ್ಥೆ ಇದ್ದರೆ ಪ್ರತ್ಯೇಕ ಪರವಾನಗಿ ಪಡೆಯಬೇಕು, ಕಾರು, ಬೈಕ್ ರೇಸಿಂಗ್‌ಗೆ ಅವಕಾಶವಿಲ್ಲ, ಸಾರ್ವಜನಿಕ ಸ್ಥಳದಲ್ಲಿ ಬಹಿರಂಗ ಮದ್ಯಪಾನಕ್ಕೆ ಅವಕಾಶವಿಲ್ಲ, ಮದ್ಯಪಾನಗೈದು ವಾಹನ ಚಲಾಯಿಸಬಾರದು. ಧ್ವನಿವರ್ಧಕ ಉಪಯೋಗಿಸಿ ಕಾಯ್ದೆ ಉಲ್ಲಂಘನೆ ನಡೆಸಿದರೆ ಕಠಿಣ ಕ್ರಮ, ಅಹಿತಕರ ಘಟನೆಗಳು ಸಂಭವಿಸಿದರೆ ಸಮೀಪದ ಪೊಲೀಸ್ ಠಾಣೆ ಅಥವಾ ಕೇರಳ ಪೊಲೀಸ್ ಟಾಲ್‌ಫ್ರೀ ನಂಬರ್ ಆದ ೧೧೨, ೧೫೧೫ ಎಂಬೀ ನಂಬ್ರಗಳಿಗೆ ಕರೆ ಮಾಡಿ ತಿಳಿಸಲು ಪೊಲೀಸರು ಸೂಚಿಸಿದ್ದಾರೆ.

You cannot copy contents of this page