ಕಾಸರಗೋಡಿನ ಮಣ್ಣಿನಲ್ಲಿ ಮಾದಕವಸ್ತುವಿಗೆ ಸ್ಥಾನವಿಲ್ಲ :ಮಾಫಿಯಾಗಳ ವಿರುದ್ಧ ಕಠಿಣ ಕ್ರಮ-ಗೃಹ ಸಚಿವ

ಕಾಸರಗೋಡು: ಆಪರೇಶನ್ ತೂಫಾನ್ ಕಾರ್ಯಾಚರಣೆಗೆ ಅತೀ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿರುವುದು ತಾಯಂದಿರಾಗಿದ್ದಾರೆ. ಇವರು ದಿನಂಪ್ರತಿ ಕಳುಹಿಸುತ್ತಿರುವ ಪತ್ರಗಳು, ಫೋನ್ ಕರೆಗಳು ಹಾಗೂ ಸಂದೇಶಗಳು ಇದನ್ನು ಸಾಬೀತುಪಡಿಸುತ್ತಿವೆಯೆಂದು ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ನಾಯಮ್ಮಾರಮೂಲೆ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ನಡೆಸಿದ ‘ಆಪರೇಶನ್ ತೂಫಾನ್ ದಿ ನಾರ್ಕೋ ಹಂಟ್’ ಜಾಗರಣ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಸರಗೋಡಿನ ಮಣ್ಣಿನಲ್ಲಿ ಮಾದಕವಸ್ತುಗಳಿಗೆ ಜಾಗವೊದ ಗಿಸುವುದಿಲ್ಲ. ಅದನ್ನು ತಡೆಯಲು ರಾಜ್ಯದ ಗಡಿ ಪ್ರದೇಶಗಳಲ್ಲಿ ತೂಪಾನ್ ಸೇನೆಯನ್ನು ನೇಮಿಸ ಲಾಗಿದೆ. ಮಾದಕವಸ್ತು ದಂಧೆಯಲ್ಲಿ ಕಾರ್ಯಾ ಚರಿಸುವವರ ವಿರುದ್ಧ ಕಾಪಾ ಹೇರಲಾ ಗುವುದು.ಅಲ್ಲದೆ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗುವುದೆಂದೂ ಸಚಿವರು ತಿಳಿಸಿದರು.

ಕುಖ್ಯಾತ ಮಾದಕವಸ್ತು ಮಾಫಿಯಾಗಳು ಸ್ವಯಂ ಮಾದಕವಸ್ತು ಉಪಯೋಗಿಸು ವುದಿಲ್ಲ. ಅವರು ಅದನ್ನು ಉಪಯೋಗಿಸದೆ ಇತರರಿಗೆ ನೀಡಿ ಅವರ ಭವಿಷ್ಯವನ್ನು  ನಾಶಗೊಳಿಸುವ  ಮೂಲಕ ಕೋಟ್ಯಾಧೀಶರಾಗು ತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಇದಕ್ಕಾಗಿ ರಾಜ್ಯದ  ೧೪ ಜಿಲ್ಲೆಗಳಲ್ಲೂ ಮಾದಕ ಮಾಫಿಯಾಗಳ ವಿರುದ್ಧ ಕಾರ್ಯಾ ಚರಣೆ ನಡೆಸಲಾಗುವುದು. ಮುಂದಿನ ತಲೆಮಾರನ್ನು ಸುರಕ್ಷಿತ ವಾಗಿರಿಸಬೇಕಾದರೆ ಮಾದಕವಸ್ತುಗಳ ಬೇರುಗಳನ್ನು ಕಿತ್ತೆಸೆಯಬೇಕೆಂದೂ ಸಚಿವ ಚೆನ್ನಿತ್ತಲ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು. ಸಚಿವ ತೂಫಾನ್ ಧ್ವಜಾರೋಹಣ ಗೈದು ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳು ಎನ್‌ಸಿಸಿ, ಎನ್‌ಎಸ್‌ಎಸ್ ಮಕ್ಕಳು ಪಾಲ್ಗೊಂಡರು.ಮಾದಕವಸ್ತುಗಳ ವಿರುದ್ಧ ಹೋರಾಟದ ಸಂಕೇತವಾಗಿ ‘ಮಾದಕ’ ಎಂದು ಬರೆದ ಬಾಕ್ಸಿಂಗ್ ಪಂಚ್ ಬ್ಯಾಗ್‌ಗೆ ಸಚಿವ ಪಂಚ್ ನಡೆಸಿದರು.ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನೇತೃತ್ವದಲ್ಲಿ ಮಾದಕ ವಿರುದ್ದ ಪ್ರತಿಜ್ಞೆ  ಬೋಧಿಸಲಾಯಿತು.

ಮಾಲಿಕ್ ದಿನಾರ್ ಜುಮಾ ಮಸೀದಿ ಇಮಾಂ ಅಬ್ದುಲ್ ಮಜಿದ್ ಬಾಖವಿ, ಚೆರ್ಕಳ ಮಾರ್ತೋಮ ಶಾಲೆಯ ಫಾ. ಜೋರ್ಜ್ ವರ್ಗೀಸ್ ವಿನು, ಸಾಹಿತಿ  ಅಂಬಿಕಾಸುತನ್ ಮಾಂಙಾಡ್, ಪುತ್ತಿಗೆ ಪಂ.ಅಧ್ಯಕ್ಷೆ ಫಿದ, ಡಾ. ಕೆ.ಕೆ.ಎನ್. ಕುರುಪ್, ಶಾಸಕರು, ಜನಪ್ರತಿನಿಧಿಗಳು ಸಚಿವರಿಂದ ತೂಫಾನ್ ಬ್ಯಾಡ್ಜ್ ಸ್ವೀಕರಿಸಿದರು.

ತೂಫಾನ್ ವಾರಿಯರ್ ಪೋಸ್ಟರ್ ಆಟೋ ರಿಕ್ಷಾ ಚಾಲಕ ಅಶ್ರಫ್ ಕುದಿರೆಪ್ಪಾರ ಅವರಿಗೆ ನೀಡಿ ಬಿಡುಗಡೆಗೊಳಿಸಲಾಯಿತು. ಶಾಸಕರಾದ ಎ.ಕೆ.ಎಂ.ಅಶ್ರಫ್, ಗೋವಿಂದನ್ ಪಳ್ಳಿಕಾಪಿಲ್, ಸಂದೀಪ್ ವಾರ್ಯರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಜು ಎಬ್ರಹಾಂ, ಕಾಸರಗೋಡು ಬ್ಲೋಕ್ ಪಂ. ಅಧ್ಯಕ್ಷ ಅಬ್ದುಲ್ಲ ಕುಂಞಿ, ಚೆಂಗಳ ಪಂ. ಅಧ್ಯಕ್ಷ ವಸಂತನ್ ಅಜಕ್ಕೋಡ್, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಪಿ.ನಿತಿನ್‌ರಾಜ್, ಅಡಿಶನಲ್ ಎಸ್‌ಪಿ ಆರ್. ಸಂತೋಷ್ ಕುಮಾರ್ ಮಾತನಾ ಡಿದರು. ಟಿಐಎಚ್‌ಎಸ್‌ಎಸ್‌ನ ಮಕ್ಕಳಿಗಾಗಿ ನಡೆದ ಕರಿಯರ್ ಗೈಡನ್ಸ್ ತರಗತಿಯನ್ನು ಸಚಿವ ಉದ್ಘಾಟಿಸಿದರು.

You cannot copy contents of this page