ಕುಂಬಳೆ: ನಾಲ್ಕು ವರ್ಷದ ಹಿಂದೆ ಕೃಷಿಯ ಅಗತ್ಯಕ್ಕಾಗಿ ಕೆಎಸ್ಇಬಿ ನೀಡಿದ ವಿದ್ಯುತ್ ಸಂಪರ್ಕಕ್ಕೆ ಸಾಕಷ್ಟು ದಾಖಲೆಗಳನ್ನು ನೀಡಲಾಗಿಲ್ಲವೆಂದು ಈಗ ಸೀತಾಂಗೋಳಿ ಕೆಎಸ್ಇಬಿ ಸೆಕ್ಷನ್ ನೌಕರರು ಪತ್ತೆಹಚ್ಚಿದ್ದಾರೆ..! ಆದರೆ ಅದಕ್ಕೆ ಯಾವುದೇ ಬೇಸರ ಮಾಡಬೇಕಾ ಗಿಲ್ಲವೆಂದು ಕೆಎಸ್ಇಬಿ ತಿಳಿಸಿದ್ದು, ಪುತ್ತಿಗೆ ಕೃಷಿಭವನ ವ್ಯಾಪ್ತಿಯಲ್ಲಿ ಈ ರೀತಿಯಲ್ಲಿ ಸಂಪರ್ಕ ನೀಡಿದ 2೦೦ರಷ್ಟು ಕೃಷಿಕರು 7೦,೦೦೦ ರೂ. ಮೊತ್ತವನ್ನು ಪಾವತಿಸಿ ದರೆ ಸಾಕು ಎಂದು ಉಪದೇಶಿಸಿದೆ. ಪುತ್ತಿಗೆ ಕೃಷಿಭವನ ವ್ಯಾಪ್ತಿಯ 2೦೦ರಷ್ಟು ಕೃಷಿಕರಿಗೆ ಇದಕ್ಕಿರುವ ಬಿಲ್ಲನ್ನು ಕಳುಹಿಸಿಕೊಡ ಲಾಗಿದೆ. ನಿಶ್ಚಿತ ದಿನಾಂಕದೊಳಗೆ ಬಿಲ್ಲು ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನು ವಿಚ್ಛೇಧಿಸಲಾ ಗುವುದೆಂದು ತಾಕೀತು ನೀಡಲಾಗಿದೆ. ಬೇಸಿಗೆ ಬಿಸಿಯ ಸಂದರ್ಭದಲ್ಲಿ ಕೃಷಿಗೆ ನೀರುಣಿಸಬೇಕಾದ ಅಗತ್ಯವಿದ್ದು ಸಂಪರ್ಕ ವಿಚ್ಛೇಧನದಿಂದ ನೀರುಣಿಸುವ ಕಾರ್ಯ ಕೃಷಿಕರು ಹೇಗೆ ಕೈಗೊಳ್ಳಬ ಹುದೆಂಬ ಬಗ್ಗೆ ಚಿಂತಿತರಾಗಿದ್ದಾರೆ.
ನಾಲ್ಕು ವರ್ಷದ ಹಿಂದೆ ಇಲ್ಲಿನ ನೌಕರರು ಯಾವ ದಾಖಲೆಯನ್ನು ನೋಡಿ ಕೃಷಿಕರಿಗೆ ಸರಕಾರದ ಯೋಜನೆ ಅನುಸಾರ ಉಚಿತ ವಿದ್ಯುತ್ ಸಂಪರ್ಕ ನೀಡಿರುವುದು ಎಂದು ಪುತ್ತಿಗೆ ಪಂ. ಅಧ್ಯಕ್ಷೆ ಆಯಿಷಾ ಶಹೀಮ ಫಿದ ವಿದ್ಯುತ್ ಸಚಿವ ಕೆ. ಕೃಷ್ಣನ್ ಕುಟ್ಟಿ, ಕೃಷಿ ಸಚಿವ ಪ್ರಸಾದ್ರೊಂದಿಗೆ ಪ್ರಶ್ನಿಸಿ ದ್ದಾರೆ. ಉಚಿತ ವಿದ್ಯುತ್ ಸಂಪರ್ಕ ನೀಡುವುದರ ಮುಂಚಿತ ಅದಕ್ಕೆ ಬೇಕಾಗಿ ಕೃಷಿಕರು ನೀಡುವ ಅರ್ಜಿ ಪೂರ್ಣವಾ ಗಿದೆ ಎಂದು ಖಚಿತಪಡಿಸ ಬೇಕಾಗಿರು ವುದು ನೌಕರರ ಕರ್ತವ್ಯ ವಾಗಿದ್ದು, ನಾಲ್ಕು ವರ್ಷ ಕಳೆದು ದಾಖಲೆಗಳಿಲ್ಲ ಎಂದು ತಿಳಿಸಿ ಸಂಪರ್ಕ ಕಡಿತ ಮಾಡಲು ಹೊರಟಿರುವುದು ಎಡರಂಗ ಸರಕಾರದ ನಿಲುವು ಆಗಿದೆಯೇ ಎಂದು ಅವರು ಸಚಿವರಲ್ಲಿ ಪ್ರಶ್ನಿಸುತ್ತಿದ್ದಾರೆ. ಬದುಕು ವುದಕ್ಕಾಗಿ ಕೃಷಿಯನ್ನು ಅವಲಂಬಿಸುತ್ತಿರುವ ಜನರ ಜೀವನ ದಾರಿಯನ್ನು ಮುಚ್ಚುವಂತೆ ಮಾಡಿ ತೊಂದರೆ ಕೊಡುವ ಸರಕಾರ, ವಿದ್ಯುತ್ ಇಲಾಖೆಯ ಯತ್ನ ಮುಂದುವರಿದರೆ ಅದನ್ನು ಕೈಕಟ್ಟಿ ನೋಡಿ ನಿಂತುಕೊಳ್ಳಲಿ ಕ್ಕಿಲ್ಲವೆಂದು ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದಾರೆ.







