ತಿರುವನಂತಪುರ: ಒಂದು ವಾರದ ಬಿಡುವಿನ ಬಳಿಕ ಇಂದು ಪುನರಾರಂಭ ಗೊಂಡ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಶಬರಿಮಲೆ ತಂತ್ರಿವರ್ಯರನ್ನು ಬಂಧಿಸಿದ ವಿಷಯವನ್ನು ಎತ್ತಿ ಹಿಡಿದು ವಿಪಕ್ಷಗಳು ನಡೆಸಿದ ಪ್ರತಿಭಟನೆ ವಿಧಾನಸಭಾ ಅಧಿವೇಶನವನ್ನು ಕಲುಷಿತಗೊಳಿಸಿತು. ಮಾತ್ರವಲ್ಲ ವಿಧಾನಸಭೆಗೆ ಆಗಮಿಸುವ ವೇಳೆ ವಿಪಕ್ಷೀಯರು ಕೈಯಲ್ಲಿ ಫಲಕ ಗಳನ್ನು ಹಿಡಿದು ಸದನಕ್ಕೆ ಆಗಮಿಸಿ ಶಬರಿಮಲೆ ತಂತ್ರಿವರ್ಯರ ಹೇಳಿಕೆ ಯನ್ನು ಎತ್ತಿ ಹಿಡಿದು ಅದರ ಹೆಸರಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿ ನಂತರ ಸಭಾತ್ಯಾಗ ನಡೆಸಿ ದರು. ಈ ಪ್ರತಿಭಟನೆ ವಿಷಯದಲ್ಲಿ ಸರಕಾರದ ನಿಲುವಿನ ಬಗ್ಗೆ ಮಾತನಾಡಿದ ಕಾನೂನು ಸಚಿವ ಪಿ. ರಾಜೀವ್ ವಿಪಕ್ಷಗಳು ಹೈಕೋರ್ಟ್‌ನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾ ರೆಂದೂ ಅದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾದ ನಿಲುವಾಗಿ ದೆಯೆಂದು ಅವರು ಹೇಳಿದರು. ತಂತ್ರಿಯವರ ಪರವಾಗಲೀ, ಆರೋಪಿಗಳ ಪರವಾಗಲೀ ಸರಕಾರ ವಾದಿಸುತ್ತಿಲ್ಲ. ಸರಿಯಾದ ರೀತಿ ಯಲ್ಲಿ ತನಿಖೆ ನಡೆಸುವುದಕ್ಕೆ ಮಾತ್ರ ವೇ ಸರಕಾರ ಆದ್ಯತೆ ನೀಡುತ್ತಿದೆ ಯೆಂದು ಅವರು ಹೇಳಿದರು.






