ನಾರಾಯಣಮಂಗಲದ ಪದ್ಮನಾಭ ಚೆಟ್ಟಿಯಾರ್ ನಿಧನ

ಕುಂಬಳೆ: ನಾರಾಯಣಮಂಗಲ  ನಿವಾಸಿ  ಎನ್. ಪದ್ಮನಾಭ ಚೆಟ್ಟಿಯಾರ್ (77) ಇಂದು ಬೆಳಿಗ್ಗೆ ಸ್ವ ಗೃಹದಲ್ಲಿ  ನಿಧನಹೊಂದಿದರು. ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಹಿರಿಯ ಸದಸ್ಯನಾದ ಇವರು ಕಾಸರಗೋಡು ಜಿಲ್ಲಾ ವೀವರ್ಸ್ ಕೋ-ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕನೂ ಆಗಿದ್ದರು.

ಮೃತರು ಪತ್ನಿ ರಾಜೀವಿ, ಮಕ್ಕಳಾದ ಎನ್. ಶಶಿಧರ, ದಿವಾಕರ, ಗೋಪಾಲಕೃಷ್ಣ, ಜಲಜಾಕ್ಷಿ, ಅಳಿಯ ಅಪ್ಪುಕುಟ್ಟನ್ ಉದುಮ, ಸೊಸೆಯಂದಿರಾದ  ಶ್ವೇತ, ವೀಣಾ, ರಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಪುತ್ರ ರಜನೀಕಾಂತ್ ಈ ಹಿಂದೆ  ನಿಧನರಾಗಿದ್ದಾರೆ.

You cannot copy contents of this page