ಬದಿಯಡ್ಕ: ಧರ್ಮಜೀವನ ಪದ್ಧತಿಯನ್ನು ರೂಢಿಸಿಕೊಂಡು ನಾವು ಮುನ್ನಡೆಯಬೇಕು. ಪ್ರಸ್ತುತ ಬದಲಾವಣೆಯ ಕಾಲಗತಿಯಲ್ಲಿ ಅಸ್ಥಿರತೆ ಸಹಜ ಆದರೆ ಅದನ್ನು ಒಗ್ಗೂಡಿಸುವುದೆ ಸಮಾಜೋತ್ಸವದ ಉದ್ದೇಶ. ಯುವ ಸಮಾಜ ಪಾಶ್ಚಾತ್ಯ ಸಂಸ್ಕೃತಿ ಸಂಸ್ಕಾರಗಳಿAದ ದಾರಿ ತಪ್ಪದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಅನ್ಯ ಧರ್ಮೀಯರು ನಮ್ಮ ದೌರ್ಬಲ್ಯ ಗಳನ್ನು ಉಪಯೋಗಿಸಿಕೊಂಡು ಆಕ್ರಮಣವನ್ನು ಮಾಡುತ್ತಿರುವುದು ಖಂಡನೀಯ ಎಂದವರು ನುಡಿದರು.
ಬದಿಯಡ್ಕ ಶ್ರೀ ಭಾರತೀ ನಗರ ಬೋಳುಕಟ್ಟೆ ಮೈದಾನದಲ್ಲಿ ಜರಗಿದ ವಿರಾಟ್ ಹಿಂದೂ ಸಮಾ ಜೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಭಾರತೀಯ ವಕೀಲರ ಪರಿಷತ್ ಕೇರಳ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಎ.ವಿ.ಕೇಶವನ್ ದಿಕ್ಸೂಚಿ ಭಾಷಣದಲ್ಲಿ ಹಿಂದುತ್ವ ಎಂದರೆ ಭಾರತಾಂಬೆಯ ಶಕ್ತಿ. ಯಾವುದೇ ರಾಜಕೀಯ ಪಕ್ಷದಲ್ಲಿ ನೀವಿದ್ದರೂ ನಮ್ಮೊಳಗೆ ಹಿಂದುತ್ವ ಎಂಬುದು ಇರಬೇಕು. ಭಾಷೆ ವೇಷಕ್ಕೆ ಅತೀತವಾದ ಭಾರತವು ಸನಾತನ ಸಂಸ್ಕಾರದ ಹಿಂದೂದೇಶವಾಗಿದೆ. ಭಾರತವನ್ನು ಕಾಯಲು ಸಂಘ ಪರಿವಾರದ ಕಾರ್ಯಕರ್ತರಿದ್ದಾರೆ ಎಂದರು. ಪ್ರಾಂಶುಪಾಲ ಡಾ.ಯಶೋದ ರಾಮಚಂದ್ರ ಮಾತ ನಾಡಿದರು. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ರಕ್ಷಾದಿsಕಾರಿ ಶಂಕರನಾರಾಯಣ ಭಟ್ ಪೆರುಮುಂಡ, ವ್ಯವಸ್ಥಾಪಕ ಜಯರಾಮ ಚೆಟ್ಟಿಯಾರ್ ಬದಿಯಡ್ಕ, ಮಾತೃಸಮಿತಿ ಅಧ್ಯಕ್ಷೆ ಜಯಂತಿ ಕುಂಟಿಕಾನ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನರೇಂದ್ರ ಬಿ.ಎನ್ ಸ್ವಾಗತಿಸಿ, ಉಪಾಧ್ಯಕ್ಷ ಗಣೇಶ ಬಿ ವಂದಿಸಿದರು.
ತಸ್ಮೆöÊ ಆಚಾರ್ಯ ಮೂಕಂಪಾರೆ ಸಂಘಗೀತೆ ಹಾಡಿದರು. ವಿಘ್ನೇಶ್ ಬಾಲಗೋಕುಲದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಸಂಜೆ ಮಾತೆಯರಿಂದ ತಿರುವಾದಿರ ನೃತ್ಯ, ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ಗುರುಪ್ರಸಾದ ರೈ ಕೆ. ಹಾಗೂ ನಾರಾಯಣ ವಿದ್ಯಾಗಿರಿ ನಿರೂಪಿಸಿದರು.






