ಜಾನುವಾರು ಸಾಗಾಟ ಆರೋಪಿಸಿ ಇಬ್ಬರಿಗೆ ಹಲ್ಲೆ:  ಆರು ಮಂದಿ ಸೆರೆ

ಮಂಜೇಶ್ವರ: ಕಸಾಯಿಖಾನೆಗೆ ಜಾನುವಾರುಗಳನ್ನು ತಲುಪಿಸುತ್ತಿರು ವುದಾಗಿ ಆರೋಪಿಸಿ ಉತ್ತರಪ್ರದೇಶ ನಿವಾಸಿಗಳಾದ ಇಬ್ಬರಿಗೆ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣದಲ್ಲಿ ಪ್ರಾಯಪೂ ರ್ತಿಯಾಗದ ಇಬ್ಬರ ಸಹಿತ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ಕುಂಜತ್ತೂರಿನ ಅನಿಲ್ ಕುಮಾರ್ (23), ಪೆರ್ಮುದೆಯ ಭರತ್‌ರಾಜ್ (19), ಇಚ್ಲಂಗೋಡಿನ ಭರತ್ (19), ರಕ್ಷಿತ್ (21) ಎಂಬಿವರನ್ನು ಹಾಗೂ 16 ವರ್ಷ ಪ್ರಾಯದ ಮತ್ತಿಬ್ಬರನ್ನು ಮಂಜೇಶ್ವರ  ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ.  ಪ್ರಾಯಪೂರ್ತಿಯಾಗ ದವರನ್ನು ರಕ್ಷಕರೊಂದಿಗೆ ಕಳುಹಿಸಲಾ ಯಿತು. ಇತರ ನಾಲ್ಕು ಮಂದಿಯನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.

ಕಳೆದ ಶನಿವಾರ ಮುಂಜಾನೆ 1.30ರ ವೇಳೆ ಹೊಸಂಗಡಿ ಬಳಿಯ  ಕರೋಡ ಎಂಬಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಪಾಲಕ್ಕಾಡ್‌ನಿಂದ ಜಾನುವಾರು ಗಳನ್ನು  ತಲುಪಿಸಿದ ಲಾರಿಯ ನೌಕರನಾದ  ಫುರ್ಖಾನ್ (47), ದಾವೂದ್ (28) ಎಂಬಿವರಿಗೆ ಹಲ್ಲೆಗೈಯ್ಯಲಾಗಿತ್ತು.  ಇವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿ  ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಗಳನ್ನು ಬಂಧಿಸಲು ಸಾಧ್ಯವಾಗಿದೆ. ತನಿಖೆಯಂಗವಾಗಿ ಆರೋಪಿ ಅನಿಲ್ ಕುಮಾರ್‌ನ ಫೋನ್ ಪೊಲೀ ಸರು ಕಸ್ಟಡಿಗೆ ತೆಗೆದುಕೊಂಡಿದ್ದರು.

RELATED NEWS

You cannot copy contents of this page