ತಲೆಗೆ 7 ಲಕ್ಷ ರೂ. ಘೋಷಿಸಲ್ಪಟ್ಟ ಪಿಎಫ್‌ಐ ಕಾರ್ಯಕರ್ತ ಎನ್‌ಐಎಯಿಂದ ಸೆರೆ

ಕೊಚ್ಚಿ: ಅಕ್ರಮವಾಗಿ ಶಸ್ತ್ರಾಸ್ತ್ರ ತರಬೇತಿ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯದ ಕಾರ್ಯಕರ್ತನನ್ನು ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಬಂಧಿಸಿದೆ.

ಮಲಪ್ಪುರಂ ವಳಾಂಚೇರಿ ನಿವಾಸಿ ಮೊಯ್ದೀನ್ ಕುಟ್ಟಿ (45) ಬಂಧಿತ ಆರೋಪಿ. 2022ರಿಂದ ಈತ ತಲೆಮರೆಸಿಕೊಂಡು ಜೀವಿಸುತ್ತಿದ್ದಾನೆ. ಇತನ ಕುರಿತು ಮಾಹಿತಿ ನೀಡುವವರಿಗೆ ಎನ್‌ಐಎ 7 ಲಕ್ಷ ರೂ. ಬಹಮಾನ ಘೋಷಿಸಿತ್ತು. ಮಾತ್ರವಲ್ಲದೆ ಆತನ ಪತ್ತೆಗಾಗಿ ಲುಕೌಟ್ ನೋಟೀಸ್ ಜ್ಯಾರಿಗೊಳಿಸಿತ್ತು. ಈ ಮಧ್ಯೆ ಆರೋಪಿ ವಿದೇಶದಿಂದ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಆ ಬಗ್ಗೆ ಮಾಹಿತಿ ಲಭಿಸಿದ ಎನ್‌ಐಎ ಅಲ್ಲಿಂದಲೇ  ಬಂಧಿಸಿ ಆತನನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page