ದೇಶದಲ್ಲಿ ಭಯೋತ್ಪಾದಕ ದಾಳಿಗೆ ಸಂಚು: ಬೃಹತ್ ಪ್ರಮಾಣದ ಸ್ಫೋಟಕ ಪತ್ತೆ

ದೆಹಲಿ: ದೇಶದಲ್ಲಿ ಬೃಹತ್ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಹರ್ಯಾಣದಲ್ಲಿ  300 ಕೆಜಿ ಆರ್‌ಡಿಎಕ್ಸ್ ಮತ್ತು ಇತರ ಭಾರೀ ಸ್ಫೋಟಕ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಹರ್ಯಾಣದ ಫರೀದಾಬಾದ್‌ನಲ್ಲಿ ಭಯೋತ್ಪಾದಕ ಸಂಪರ್ಕ ಹೊಂದಿರುವ ಶಂಕಿತ ವೈದ್ಯರೊಬ್ಬರಿಂದ  ಈ ಬೃಹತ್ ಪ್ರಮಾಣದ ಆರ್‌ಡಿಎಕ್ಸ್, ಎಕೆ 47  ಮತ್ತು ಮದ್ದುಗುಂಡುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಶಂಕಿತ ವೈದ್ಯನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಪೊಲೀಸರ ವಶಕ್ಕೊ ಗಾದ ಈ ವೈದ್ಯ ಜಮ್ಮು  ಕಾಶ್ಮೀರಕ್ಕೆ ಸೇರಿದವನಾಗಿ ದ್ದಾನೆ. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಹರ್ಯಾಣ ಪೊಲೀಸರು ಈತನಕ ಬಿಡುಗಡೆಮಾಡಿಲ್ಲ. ಇದಕ್ಕೆ ಸಂಬಂಧಿಸಿ ಇನ್ನೋರ್ವನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಜಮ್ಮು ಮತ್ತು ಕಾಶ್ಮೀರದ ಸಹರಾನ್ಪುರದ ವೈದ್ಯನಾಗಿದ್ದಾನೆ.  ಅನಂತ್‌ನಾಗ್‌ನಲ್ಲಿ ಭಯೋತ್ಪಾದಕ ಸಂಘಟನೆಯಾದ ಜೈಶ್ ಎ ಮೊಹಮ್ಮದ್ ಜತೆ ಈತ ನಿಕಟ ಸಂಪರ್ಕ ಹೊಂದಿದ್ದಾನೆ. ಈತ ಫರೀದಾಬಾದ್‌ನಲ್ಲಿ  ಬಾಡಿಗೆ ಮನೆಯೊಂದರಲ್ಲಿ  ವಾಸಿಸುತ್ತಿದ್ದನು. ಅಲ್ಲಿಗೆ ಪೊಲೀಸರು ದಾಳಿ ನಡೆಸಿ ಈ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಆರೋಪಿ ವೈದ್ಯ ಅಲ್ಲಿ ವಾಸಿಸುತ್ತಿರಲಿಲ್ಲ.  ಸ್ಫೋಟಕ ವಸ್ತುಗಳನ್ನು ದಾಸ್ತಾನು ಇರಿಸಲು ಮಾತ್ರವೇ ಆ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿಯಿಂದ 300 ಕೆಜಿ ಆರ್‌ಡಿಎಕ್ಸ್ ಮಾತ್ರವಲ್ಲದೆ ಎಕೆ೪೭ ರೈಫಲ್ಸ್, 84 ಕಾರ್ಟೀಜನ್ಸ್‌ಗಳು ಮತ್ತು ರಾಸಾಯನಿಕ ಸಾಮಗ್ರಿಗಳನ್ನು ತುಂಬಿಸಿಡಲಾಗಿದ್ದ 14 ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

RELATED NEWS

You cannot copy contents of this page