ಮಿಂಚಿಪದವು ಕ್ಷೇತ್ರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಎಡನೀರು ಶ್ರೀಗಳಿಂದ ಉದ್ಘಾಟನೆ

ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಿಯಮ್ಮ ಮಹಾಲಿಂಗೇಶ್ವರ ದೇಗುಲದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ನಿನ್ನೆ ಸಂಜೆ ನಡೆದ ಧಾರ್ಮಿಕ ಸಭೆಯನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಎಂ. ಅಧ್ಯಕ್ಷತೆ ವಹಿಸಿದರು. ಹಿಂದೂ ಐಕ್ಯವೇದಿ ರಾಜ್ಯ ಕಾರ್ಯಾಧ್ಯಕ್ಷ ವಲ್ಸನ್ ತಿಲ್ಲಂಗೇರಿ, ಧಾರ್ಮಿಕ ಚಿಂತಕ ಲಕ್ಷ್ಮೀಶ ಗಬ್ಲಡ್ಕ ಉಪನ್ಯಾಸ ನೀಡಿದರು.

ತಲಶ್ಶೇರಿ ಚೀಫ್ ಜ್ಯುಡೀಶ್ಯಲ್ ಮೆಜಿಸ್ಟ್ರೇಟ್ ಕರುಣಾಕರ ಕೆ.ಕೆ.ಪುರ, ಮಾಜಿ ಶಾಸಕ ಬಾಲಕೃಷ್ಣ ಭಟ್ ಕೋಳಿಕ್ಕಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ್ ಆಯರ್, ನ್ಯಾಯವಾದಿ ಸುಬ್ಬಯ್ಯ ರೈ, ಬಿಜೆಪಿಯ ಸುಧಾಮ ಗೋಸಾಡ, ಹನುಮಗಿರಿ ದೇಗುಲದ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ, ಬಿಪಿನ್‌ದಾಸ್ ರೈ ಆದೂರುಗುತ್ತು, ಮಲಬಾರ್ ದೇವಸ್ವಂ ಬೋರ್ಡ್‌ನ ಎ.ಕೆ. ಶಂಕರನ್ ಆದೂರು, ಅಡೂರು ದೇಗುಲದ ಕಾರ್ಯಾಧ್ಯಕ್ಷ ಪ್ರಭಾಕರ ನಾಯ್ಕ್, ನ್ಯಾಯವಾದಿ ಅನಂತರಾಮ ಕಾಸರಗೋಡು, ಆಡಳಿತ ಮೊಕ್ತೇಸರ ಶ್ರೀನಿವಾಸ ಕಕ್ಕಿಲ್ಲಾಯ, ವಾಮ ದೇವ ಪುಣಿಂಚಿತ್ತಾಯ, ದಾಮೋ ದರ ಕುಳದಪಾರೆ, ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ರೈಯವ ರನ್ನು ಕಾರ್ಯಕ್ರಮದಲ್ಲಿ ಗೌರವಿಸ ಲಾಯಿತು. ಮಾನಸ, ವೈಷ್ಣವಿ, ಶರಣ್ಯ ಪ್ರಾರ್ಥನೆ ಹಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಎಂ. ಸ್ವಾಗತಿಸಿ, ಸೇವಾಸಮಿತಿ ಕಾರ್ಯದರ್ಶಿ ಮನೋಜ್ ಕುಮಾರ್ ಎಂ.ಸಿ. ವಂದಿಸಿದರು. ಯತೀಶ್ ಕುಮಾರ್ ರೈ ನಿರೂಪಿಸಿದರು.

RELATED NEWS

You cannot copy contents of this page