ಉಪ್ಪಳ: ಉದ್ಯೋಗದಿಂದ ನಿವೃತ್ತರಾದ ಬಳಿಕ ತಿರುವನಂತಪುರ ನಿವಾಸಿ ಸರಕಾರಿ ಕ್ವಾರ್ಟರ್ಸ್ ತೊರೆದು ಉಪ್ಪಳದಲ್ಲಿ ಮನೆಯೊಂ ದನ್ನು ಬಾಡಿಗೆಗೆ ಪಡೆದುಕೊಂಡರು. ಈಗ ಈ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಇತರ 18 ಮಂದಿ ಮನಃಶಾಂತಿಯಿಂದ ಜೀವಿಸುತ್ತಿದ್ದಾರೆ.
ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದ ಚಂದ್ರಶೇಖರನ್ ತಂಬಿ ಕಳೆದ ಫೆಬ್ರವರಿ 28ರಂದು ಸೇವೆಯಿಂದ ನಿವೃತ್ತರಾದರು. ಸೇವೆಯಿಂದ ನಿವೃತ್ತರಾದ ಬಳಿಕ ಹೆಚ್ಚಿನವರು ತಮ್ಮ ಊರಿಗೆ ತೆರಳುವುದು ಸಾಮಾನ್ಯವಾಗಿದ್ದರೂ ಇವರು ಅಂದೇ ಬಾಡಿಗೆಗೆ ಕ್ವಾರ್ಟರ್ಸ್ ಪಡೆದುಕೊಂಡು ಇಲ್ಲಿ ಉಳಿದಿದ್ದಾರೆ. 7 ವರ್ಷದ ಹಿಂದೆ ವರ್ಗಾವಣೆಗೊಂಡು ಇವರು ಜಿಲ್ಲೆಗೆ ತಲುಪಿದ್ದಾರೆ. ಹಲವು ಕಡೆಗಳಲ್ಲಿ ಸೇವೆಗೈದು ಮೂರು ವರ್ಷದ ಹಿಂದೆ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ನೇಮಕಗೊಂಡಿದ್ದಾರೆ. ಇಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಆಗಿರುವಾಗ ಬೆಳಿಗ್ಗೆ ಆಸ್ಪತ್ರೆಗೆ ತಲಪುವವರು ಬ್ಯಾಗ್‌ಗಳಲ್ಲಿ ಬೆಕ್ಕಿನ ಮರಿಗಳನ್ನು ತಂದು ಆಸ್ಪತ್ರೆ ಪರಿಸರದಲ್ಲಿ ಉಪೇಕ್ಷಿಸುತ್ತಿರುವುದನ್ನು ಇವರು ಕಂಡಿದ್ದಾರೆ. ಅವುಗಳು ಇತರ ಬೆಕ್ಕುಗಳ ಆಕ್ರಮಣದಿಂದ ನಿಸ್ಸಹಾಯಕರಾಗಿ ಕೂಗುತ್ತಿರುವುದನ್ನು ಹಾಗೂ ಆಹಾರಕ್ಕೆ ಬೇಕಾಗಿ ಕೂಗುತ್ತಿದ್ದ ದಯನೀಯ ಸ್ಥಿತಿಯನ್ನು ಕಂಡು ಬೆಕ್ಕಿನಲ್ಲಿ ಸಹಾನುಭೂತಿ ತೋರಿದ ತಂಬಿ ಅವುಗಳನ್ನು ಕ್ವಾರ್ಟರ್ಸ್‌ಗೆ ಕೊಡುಹೋಗಿ ಸ್ನಾನ ಮಾಡಿದಿ ಮೂರು ಹೊತ್ತು ಆಹಾರ ನೀಡಿ ಬೆಳೆಸಿದರು. ಪ್ರತಿರೋಧ ಚುಚ್ಚುಮದ್ದುಗಳನ್ನು ನೀಡಿದರು. ಮಂಗಳೂರಿಗೆ ಕೊಂಡೊಯ್ದು ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೂ ನಡೆಸಿದರು. ಅನಾಥವಾಗಿರುವ ಬೆಕ್ಕುಗಳಿಗೆ ಸಾಕಲು ಒಬ್ಬರು ಸಿಕ್ಕಿದ ಸಂತೋಷ ಆ ಬೆಕ್ಕುಗಳಿಗುಂಟಾಯಿತು. ಚಂದ್ರಶೇಖರನ್ ಮತ್ತು ಪತ್ನಿಗೆ ಇದರಿಂದ ನೆಮ್ಮದಿ ಉಂಟಾಯಿತು. ಈಗ ೧೮ ಬೆಕ್ಕುಗಳಿಗೆ ಇವರು ಆಹಾರ ನೀಡುತ್ತಿದ್ದು, ನಿದ್ದೆಯೂ ಕೂಡಾ ಇವುಗಳ ಜೊತೆಯಲ್ಲೇ ಮಾಡುತ್ತಿದ್ದಾರೆ.
ಇದ್ದ ಓರ್ವ ಪುತ್ರ ಕೆಲವು ಸಮಯದ ಹಿಂದೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದಾರೆ. ಈಗ ಅತ್ಯಗತ್ಯಕ್ಕೆ ತಿರುವನಂತಪುರಕ್ಕೆ ತೆರಳಬೇಕಾಗಿ ಬಂದರೆ ಪತ್ನಿ ಅಥವಾ ಪತಿ ಯಾರಾದರೂ ಒಬ್ಬರು ಮನೆಯಲ್ಲಿ ಉಳಿದುಕೊಂಡು ಬೆಕ್ಕನ್ನು ನೋಡಿಕೊಳ್ಳುತ್ತಿದ್ದಾರೆ. ಬೆಕ್ಕುಗಳಿಗೆ, ನಾಯಿಗಳಿಗೆ ನಾವು ಪ್ರೀತಿ ನೀಡಿದರೆ ಅವು ಮರಳಿ ನೀಡುವ ಸ್ನೇಹ ಅನುಭವಿಸಿದರೆ ಮಾತ್ರವೇ ತಿಳಿದು ಬರುವುದು ಎಂದು ಚಂದ್ರಶೇಖರನ್ ನುಡಿಯುತ್ತಾರೆ. ಉಪ್ಪಳದೊಂದಿಗಿನ ಸ್ನೇಹ ಹಾಗೂ ಅಲ್ಲಿ ದುಡಿಯುತ್ತಿ ರುವಾಗ ಸ್ಥಳೀಯರೊಂದಿಗೆ ಉಂಟಾದ ಸ್ನೇಹದಿಂದ ಈ ಸ್ಥಳದಿಂದ ಬದಲಾಗಲು ಮನಸ್ಸು ಬರುವುದಿಲ್ಲವೆಂದು ಚಂದ್ರಶೇಖರನ್ ನುಡಿಯುತ್ತಾರೆ. ಬೆಕ್ಕುಗಳನ್ನು ಸಾಕುವ ಸಂಘಟನೆಗಳು ಮಂಗಳೂರು ಹಾಗೂ ಸುರತ್ಕಲ್‌ನಲ್ಲಿ ಇದ್ದಾರೆ ಎಂಬ ಬಗ್ಗೆ ಕೇಳಿ ಬಂದಿದ್ದು, ಆ ರೀತಿಯ ಸಂಘಟನೆಗಳಿದ್ದರೆ ಬೆಕ್ಕುಗಳನ್ನು ಅವರ ವಶಕ್ಕೆ ಹಸ್ತಾಂತರಿಸಿ ನಾಲ್ಕೈದು ಬೆಕ್ಕುಗಳನ್ನು ತಿರುವನಂತಪುರ ಶಾಸ್ತಮಂಗಳದ ಸ್ವಂತ ಮನೆಗೆ ತೆರಳಬೇಕೆಂದು ಚಂದ್ರಶೇಖರನ್ ತಂಬಿಯ ಆಗ್ರಹವಾಗಿದೆ.





