ನಿವೃತ್ತ ಆರೋಗ್ಯ ಇಲಾಖೆ ನೌಕರನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಜನವಾಸವಿಲ್ಲದ ತರವಾಡು ಮನೆಯಲ್ಲಿ ನಿವೃತ್ತ ಆರೋಗ್ಯ ಇಲಾಖೆ ನೌಕರನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಿಲಿಕೋಡ್ ಕಣ್ಣಂಗೈಯ ಕೆ.ವಿ. ರವೀಂದ್ರನ್ (65)ರ ಮೃತದೇಹ ನಿನ್ನೆ ಸಂಜೆ ತರವಾಡು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹಗ್ಗ ತುಂಡು ಮಾಡಿ ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಆ ವೇಳೆ ಮೃತಪಟ್ಟಿದ್ದರು. ಇವರ ಪುತ್ರ ವಿಪಿನ್ ಕೆಲವು ವರ್ಷಗಳ ಹಿಂದೆ ರೈಲಿನಿಂದ ಬಿದ್ದು ಮೃತಪಟ್ಟಿದ್ದರು. ಮೃತದೇಹವನ್ನು ಕಣ್ಣೂರು ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಶವಾಗಾರದಲ್ಲಿರಿಸಲಾಗಿದೆ. ಮೃತರು ಪತ್ನಿ ಕೆ. ಗೀತ, ಪುತ್ರಿ ಕೆ. ಶ್ರುತಿ, ಅಳಿಯ ಶಹರಾಜನ್, ಸಹೋದರ ಚಂದ್ರನ್ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page