ವಿವಿಧೆಡೆ ಕಡಲ್ಕೊರೆತದಿಂದ ಹಾನಿಗೊಂಡ ರಸ್ತೆ: ದುರಸ್ತಿಗೆ ಸ್ಥಳೀಯರ ಒತ್ತಾಯ

ಉಪ್ಪಳ: ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳದಲ್ಲಿ ವ್ಯಾಪಕ ಕಡಲ್ಕೊರೆತ ಉಂಟಾಗಿ ಸಮುದ್ರ ತೀರ ಪ್ರದೇಶದ ರಸ್ತೆಗಳು ಸಮುದ್ರ ಪಾಲಾಗಿ ನಾಶಗೊಂಡಿವೆ. ಆದರೆ ಇದುವರೆಗೂ ರಸ್ತೆ ಮರು ನಿರ್ಮಿಸದೆ ಇರುವುದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಪಂಚಾಯತ್‌ನ ಹನುಮಾನಗರ, ಶಿವಾಜಿನಗರ, ಕುದುಪುಳು, ಬಂಗ್ಲ, ಪೆರಿಂಗಡಿ, ಬೇರಿಕೆ ಸಹಿತ ವಿವಿಧ ಭಾಗಗಳಲ್ಲಿ ರಸ್ತೆಗಳು ಹಾನಿಗೊಂಡು ಸ್ಥಳೀಯ ಮೀನು ಕಾರ್ಮಿಕರ ಕುಟುಂಬಗಳ ಸಂಚಾರಕ್ಕೆ ಸಮಸ್ಯೆಯಾಗಿರುವುದಾಗಿ ದೂರಲಾಗಿದೆ. ರೋಗಿಗಳನ್ನು ಕೊಂಡೊಯ್ಯಲು ಕೂಡಾ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿರುವುದಾಗಿ ದೂರಲಾಗಿದೆ. ರಸ್ತೆ ಹಾಗೂ ತಡೆಗೋಡೆಗಳನ್ನು ನಿರ್ಮಿಸಲು ಊರವರು ವಿವಿಧ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಉಂಟಾಗಿಲ್ಲವೆAದು ಊರವರು ತಿಳಿಸಿದ್ದಾರೆ. ಮಳೆಗಾಲ ಮುಂಚಿತವಾಗಿ ರಸ್ತೆ ಹಾಗೂ ತಡೆಗೋಡೆಯನ್ನು ನಿರ್ಮಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.

You cannot copy contents of this page