ಬದಿಯಡ್ಕ: ಹಿರಿಯ ಕೃಷಿಕ, ಆರ್ಎಸ್ಎಸ್ನ ಹಿರಿಯ ಮುಖಂಡ ಮೀಸೆಬೈಲು ರಾಮ ಭಟ್ ಕೆ.ಎಂ.(92) ಇಂದು ಮುಂಜಾನೆ ನಿಧನ ಹೊಂದಿದರು. ಇವರು ಬಿಜೆಪಿಯಿಂದ ಈ ಹಿಂದೆ ಬದಿಯಡ್ಕ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರ ಪತ್ನಿ ವೆಂಕಟೇಶ್ವರಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಸುಬ್ರಹ್ಮಣ್ಯ ಶರ್ಮ ಎಂ.ಆರ್, ಸುಲೋಚನ, ರಾಜೇಶ್ವರಿ, ಉಷಾ, ಸೊಸೆ ವೀಣಾ, ಅಳಿಯಂದಿರಾದ ಸುಬ್ರಹ್ಮಣ್ಯ ಭಟ್ ಪುಳು, ಗಣಪತಿ ಕಿನಿಲಕೋಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






