ಆರ್‌ಎಸ್‌ಎಸ್ ಹಿರಿಯ ಸ್ವಯಂ ಸೇವಕ ಆನಂದ ಶೆಟ್ಟಿ ವಾನಂದೆ ನಿಧನ

ಉಪ್ಪಳ: ಆರ್‌ಎಸ್‌ಎಸ್‌ನ ಹಿರಿಯ ಸ್ವಯಂ ಸೇವಕ ಶಿರಿಯ ವಾನಂದೆ ನಿವಾಸಿ ಆನಂದ ಶೆಟ್ಟಿ (81) ನಿಧನಹೊಂದಿದರು. ವೃದ್ಧಾಪ್ಯ ಸಹಜ ಅಸೌಖ್ಯ ಬಾಧಿಸಿದ್ದ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ  ನಿಧನ ಸಂಭವಿಸಿದೆ.

ಆರ್‌ಎಸ್‌ಎಸ್‌ನ ಶಿರಿಯ ಶಾಖೆ ಮುಖ್ಯ ಶಿಕ್ಷಕ್ ಆಗಿ ಇವರು ಕಾರ್ಯಾಚರಿಸಿದ್ದರು. ಸಿರಿಯ ಸೀರೆ ಶ್ರೀ ಶಂಕರನಾರಾಯಣ ಕ್ಷೇತ್ರ ಸೇವಾ ಸಮಿತಿ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಉತ್ತಮ ಕೃಷಿಕರೂ ಆಗಿದ್ದ ಇವರಿಗೆ ಮಂಗಲ್ಪಾಡಿ ಪಂಚಾಯತ್ ಹಾಗೂ ಕೃಷಿ ಭವನ ಜಂಟಿಯಾಗಿ ಮಾದರಿ ಕೃಷಿಕ ಪುರಸ್ಕಾರ ನೀಡಿ ಗೌರವಿಸಿತ್ತು. ಶಿರಿಯ ಶಾಲೆಯನ್ನು ಹೈಸ್ಕೂಲ್ ಆಗಿ ಭಡ್ತಿಗೊಳಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಕುಂಬಳೆ ಅಕ್ಷತಾ ಫಿನಾನ್ಸ್‌ನ ಮಾಲಕರೂ ಆಗಿದ್ದಾರೆ. ೧೯೬೦ರಿಂದ ೧೯೮೦ರ ತನಕ ಶಿರಿಯ ರೈಲು ನಿಲ್ದಾಣದಲ್ಲಿ ಟಿಕೆಟ್ ವಿತರಕರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಗುಲಾಬಿ, ಪುತ್ರ ಮನೋಜ್ ಕುಮಾರ್ ಶೆಟ್ಟಿ, ಸೊಸೆ ಭವ್ಯ (ಬೆಂಗಳೂರಿನಲ್ಲಿ ಪ್ರೊಫೆಸರ್), ಸಹೋದರ ಬಿಜೆಪಿ ಹಿರಿಯ ನೇತಾರ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಸಹೋದರಿಯರಾದ ಲೀಲಾವತಿ ಶೆಟ್ಟಿ, ಪುಷ್ಪಾವತಿ ಶೆಟ್ಟಿ, ರತ್ನಾವತಿ ಶೆಟ್ಟಿ, ಹೇಮಲತಾ ಶೆಟ್ಟಿ, ಯಶೋಧ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಜಯರಾಜ್ ಶೆಟ್ಟಿ ಎಂಬವರು ಈ ಹಿಂದೆ ನಿಧನರಾಗಿದ್ದಾರೆ. ಆನಂದ ಶೆಟ್ಟಿಯವರ  ಅಂತ್ಯಸಂಸ್ಕಾರ ಇಂದು ಸಂಜೆ ೪ ಗಂಟೆಗೆ ಮನೆ ಪರಿಸರದ ಹಿತ್ತಿಲಲ್ಲಿ ನಡೆಯಲಿದಯೆಂದು ಸಂಬಂಧಿಕರು ತಿಳಿಸಿದ್ದಾರೆ.

RELATED NEWS

You cannot copy contents of this page