ಶಬರಿಮಲೆ: ಶಬರಿಮಲೆ ದೇಗುಲ ದಿಂದ ಭಾರೀ ಪ್ರಮಾಣದ ಚಿನ್ನ ಕಳವು ನಡೆಸಿದ ಪ್ರಕರಣದ ತನಿಖೆ ಮುಂದು ವರಿಯುತ್ತಿರುವ ವೇಳೆಯಲ್ಲೇ ಇದೇ ದೇಗುಲದಿಂದ ಲಕ್ಷಾಂತರ ರೂಪಾಯಿ ಗಳನ್ನು ಅನಧಿಕೃತವಾಗ ಸಾಗಿಸಲಾಗಿದೆ ಯೆಂಬ ಕಳವಳಕಾರಿ ಮಾಹಿತಿಯೂ ಈಗ ಬೆಳಕಿಗೆ ಬಂದಿದೆ. ಶಬರಿಮಲೆ ದೇಗುಲದಲ್ಲಿ ದಿನ ವೇತನ ಆಧಾರದಲ್ಲಿ ನೇಮಿಸಲ್ಪಟ್ಟ ಕೆಲವು ನೌಕರರು ಹಾಗೂ ಅರ್ಚಕರು ತಮ್ಮ ಬ್ಯಾಂಕ್ ಹಾಗೂ ಅಂಚೆ ಖಾತೆಗಳ ಮೂಲಕ ಊರಲ್ಲಿ ರುವ ಮನೆಯವರಿಗೆ ಪ್ರತೀವಾರ 10,೦೦೦ ರೂ.ನಿಂದ 5೦,೦೦೦ ರೂ. ತನಕ ಹಣ ಕಳುಹಿಸಿ ಕೊಟ್ಟಿದ್ದಾರೆಂಬ ವಿಷಯ ಬೆಳಕಿಗೆ ಬಂದಿದೆ.
ಶಬರಿಮಲೆ ಚಿನ್ನ ಕಳವು ಭಾರೀ ವಿವಾದಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಸನ್ನಿಧಾನ ಮತ್ತು ಅಂಚೆ ಕಚೇರಿಯ ಅಧಿಕಾರಿಗಳು ಈ ಕುರಿತಾದ ಮಾಹಿತಿಯನ್ನು ಮುಜರಾಯಿ ಮಂಡಳಿಯ ವಿಜಿಲೆನ್ಸ್ ವಿಭಾಗದ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಿಲೆನ್ಸ್ ವಿಭಾಗ ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ. ಇದರಂತೆ ಶಬರಿಮಲೆಯಲ್ಲಿ ದಿನ ವೇತನ ಆಧಾರದಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರ ಹಾಗೂ ಅರ್ಚಕರ ಬ್ಯಾಂಕ್ ಮತ್ತು ಅಂಚೆ ಖಾತೆಗಳ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದ ಬಳಿಕ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುವುದೆಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಲಪೂಜೆ ಮತ್ತು ಮಕರ ಜ್ಯೋತಿ ತೀರ್ಥಾಟನೆ ಋತುಗಳಲ್ಲಿ ಈ ರೀತಿ ಭಾರೀ ಮೊತ್ತವನ್ನು ಕೆಲವು ನೌಕರರು, ಅರ್ಚಕರು ಮನೆಗಳಿಗೆ ಕಳುಹಿಸಿಕೊ ಟ್ಟಿರುವುದಾಗಿ ಹೇಳಲಾಗುತ್ತಿದೆ. ಮಂಡಲ ಪೂಜೆ ಋತುವಿನ ವೇಳೆ 42 ದಿನಗಳ ಅವಧಿಗೆ ಹಾಗೂ ಮಕರಜ್ಯೋತಿ ಋತುವಿನ ವೇಳೆ 22 ದಿನಗಳ ಅವಧಿಗೆ ಹಲವರನ್ನು ದಿನಕ್ಕೆ 650 ರೂ. ವೇತನ ಆಧಾರದಲ್ಲಿ ನೇಮಿಸಲಾಗಿತ್ತು. ಹೀಗೆ ನೇಮಿಸಲ್ಪಟ್ಟ ನೌಕರರ ಹಾಗೂ ಅರ್ಚಕರ ಬ್ಯಾಂಕ್ ಖಾತೆಗಳನ್ನು ವಿಜಿಲೆನ್ಸ್ ವಿಭಾಗ ಈಗ ಪರಿಶೀಲಿಸತೊಡಗಿದೆ.







