ದೈವ ನೇಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಅಪಘಾತ  ಸ್ಕೂಟರ್ ಮಗುಚಿ ಯುವತಿಯರಿಬ್ಬರಿಗೆ ಗಾಯ

ಕಾಸರಗೋಡು: ದೈವನೇಮ ಕಂಡು ಹಿಂತಿರುಗುತ್ತಿದ್ದ ಯುವತಿಯರು ಸಂಚರಿಸಿದ ಸ್ಕೂಟರ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಇಬ್ಬರು ಗಾಯಗೊಂಡರು.  ಪೆರುಂಬಳ ಚಿರವಾದುಕ್ಕಲ್ ನಿವಾಸಿ ಪ್ರಮೀಳ (45), ಸಂಬಂಧಿಕೆ ಶ್ರೀಕೃಷ್ಣ (25) ಗಾಯಗೊಂಡವರು. ಇವರನ್ನು ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಿನ್ನೆ ಮುಂಜಾನೆ 5 ಗಂಟೆವೇಳೆ ಪೆರುಂಬಳ, ಚೆಲ್ಲುಞಿಯಲ್ಲಿ ಅಪಘಾತ ಸಂಭವಿಸಿದೆ.

ಅಣಿಞ ತುಳಿಚ್ಚೇರಿ ತರವಾಡಿನಲ್ಲಿ ದೈವಕೋಲದಲ್ಲಿ ಭಾಗವಹಿಸಿ ಇವರಿಬ್ಬರು ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದರು. ಚೆಲ್ಲುಞಿ ಇಳಿಜಾರಿಗೆ ತಲುಪಿದಾಗ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದಿದೆ. ಇನ್ನೊಂದು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಸಂಬಂಧಿಕರು ಇವರಿಬ್ಬರು ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದಿಂದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED NEWS

You cannot copy contents of this page