ಕಾಸರಗೋಡು:ವಿಧಾನಸಭಾ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ದಿನಗಳಂದು ರಾಜ್ಯದಲ್ಲಿ ಸರಕಾರ ಡ್ರೈ ಡೇ ಘೋಷಿಸಿದೆ. ಇದರಂತೆ ಮತದಾನ ನಡೆಯುವ ಈ ತಿಂಗಳ ೯ರಂದು ಹಾಗೂ ಮತ ಎಣಿಕೆ ನಡೆಯುವ ಮೇ 4ರಂದು ರಾಜ್ಯದಲ್ಲಿ ಪೂರ್ಣ ಮದ್ಯ ನಿಷೇಧ ಜ್ಯಾರಿಯಲ್ಲಿರುವುದು. ಮತದಾನ ಕೊನೆಗೊಳ್ಳುವುದರ 48 ಗಂಟೆಗಳ ಮುಂಚಿತವಾಗಿ ಮದ್ಯ ಮಾರಾಟ ವನ್ನು ಕಡ್ಡಾಯವಾಗಿ ನಿಷೇಧಿಸಲಾ ಗಿದೆ. ಎಲ್ಲಾದರೂ ಮರು ಮತದಾನ ಅಗತ್ಯವಿದ್ದಲ್ಲಿ ಆ ದಿನಗಳಲ್ಲೂ ಡ್ರೈ ಡೇ ಆಗಿರುವುದು. ಇದರಂತೆ ಹೋಟೆಲ್ ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ಸ್ಟಾರ್ ಹೋಟೆಲ್‌ಗಳು ಸಹಿತ ಮದ್ಯ ಮಾರಾಟಗೈಯ್ಯಲು ಲೈಸನ್ಸ್ ಇರುವ ಯಾವುದೇ ಸಂಸ್ಥೆಯಲ್ಲಿ ಈ ದಿನಗಳಂದು ಮದ್ಯ ಮಾರಾಟ, ವಿತರಣೆ ನಡೆಸಕೂಡದು. ಸಾರ್ವಜನಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಮದ್ಯ ವಿತರಿಸುವುದು ಅಪರಾಧವಾಗಿದೆ. ಮದ್ಯವನ್ನು ಅನಧಿಕೃತವಾಗಿ ದಾಸ್ತಾನಿರಿಸುವುದನ್ನು ತಡೆಯಲು ಹಾಗೂ ನೆರೆ ರಾಜ್ಯಗಳಿಂದ ಮದ್ಯ ಸಾಗಾಟ ನಿಯಂತ್ರಿಸಲು ಅಬಕಾರಿ ಇಲಾಖೆ ಹಾಗೂ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಬಕಾರಿ ಕಮಿಶನರ್‌ಗೆ ಹೊಣೆಗಾರಿಕೆ ನೀಡಲಾಗಿದೆ.







