ಚಿಕ್ಕಮಗಳೂರು ಬಳಿ ಅರಣ್ಯದಲ್ಲಿ  ನಾಪತ್ತೆಯಾದ ಕೇರಳದ ಬಾಲಕಿಗಾಗಿ ಮುಂದುವರಿದ ಶೋಧ

ಚಿಕ್ಕಮಗಳೂರು: ಇಲ್ಲಿಗೆ ಸಮೀಪದ ಮುಳ್ಳಯ್ಯನಗಿರಿಗೆ ಪ್ರವಾಸಕ್ಕಾಗಿ ತಲುಪಿ ಬಳಿಕ ಕಾಡಿನಲ್ಲಿ ನಾಪತ್ತೆಯಾದ ಕೇರಳದ ಪಾಲಕ್ಕಾಡ್ ನಿವಾಸಿಯಾದ ಶ್ರೀನಂದನ (15) ಎಂಬಾಕೆಗಾಗಿ ಶೋಧ ಕಾರ್ಯ ಮುಂದುವರಿ ಯುತ್ತಿದೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾದ ಬಾಲಕಿ ತನ್ನ ಪೋಷಕರು ಸಹಿತ ಸುಮಾರು 40 ಮಂದಿಯ ತಂಡದೊಂದಿಗೆ ಈ ತಿಂಗಳ ೭ರಂದು ಚಿಕ್ಕಮಗಳೂರಿಗೆ ತಲುಪಿದ್ದಳು. ಅಂದು ಸಂಜೆ 6 ಗಂಟೆ ವೇಳೆಗೆ ಚಂದ್ರದ್ರೋಣ ಪರ್ವತಶ್ರೇ ಣಿಯ ಮಾಣಿಕ್ಯಧಾರಾ ಸಮೀಪ ಬಾಲಕಿ ನಾಪತ್ತೆಯಾಗಿದ್ದಾಳೆ. ಈ ವಿಷಯ ಬಹಿರಂಗಗೊಂಡ ತಕ್ಷಣ ಸ್ಥಳೀಯರು ಹಾಗೂ ಪ್ರವಾಸಿಗರು ಶೋಧಕಾರ್ಯ ಆರಂಭಿಸಿದರು. ಅನಂತರ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಹುಡುಕಾಟ ಆರಂಭಿಸಿದ್ದಾರೆ. ಅಗ್ನಿಶಾಮಕದಳವೂ ಸೇರಿ ಸುಮಾರು 100 ಸದಸ್ಯರುಳ್ಳ ವಿಶೇಷ ದಳ ಶೋಧ ನಡೆಸುತ್ತಿದೆ. ದಟ್ಟ ಅರಣ್ಯ ಹಾಗೂ ಕಡಿದಾದ ಪರ್ವತ ಪ್ರದೇಶವಾಗಿರುವುದರಿಂದ ಬಾಲಕಿಯನ್ನು ಪತ್ತೆಹಚ್ಚಲು ಡ್ರೋನ್ ಕ್ಯಾಮರಾಗಳನ್ನು ಬಳಸಲಾಗಿದೆ. ಆದರೆ ಶ್ರೀನಂದನ ಪತ್ತೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

ಇದೇ ವೇಳೆ ಬಾಲಕಿಯನ್ನು ಯಾರಾದರೂ ಅಪಹರಿಸಿರಬಹು ದೆಂದು ಹೆತ್ತವರು ಆರೋಪಿಸುತ್ತಿ ದ್ದಾರೆ.  ಆದ್ದರಿಂದ ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇತ್ತೀಚೆಗಷ್ಟೇ ಮಡಿಕೇರಿ ಬಳಿಯ ತಡಿಯಾಂಡಮೋಳ್ ಬೆಟ್ಟಕ್ಕೆ ಪ್ರವಾಸ ಹೋಗಿದ್ದ ಕೇರಳದ ಇನ್ನೋರ್ವೆ  ಯುವತಿ  ಕಾಡಿನಲ್ಲಿ ನಾಪತ್ತೆಯಾಗಿದ್ದಳು. ಬಳಿಕ ಅರಣ್ಯ, ಪೊಲೀಸರ್ ಇಲಾಖೆ ಸಿಬ್ಬಂದಿಗಳು ನಡೆಸಿದ ಶೋಧ ವೇಳೆ ನಾಲ್ಕು ದಿನಗಳ ಬಳಿಕ ಪತ್ತೆಯಾಗಿದ್ದಳು. ಈ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿರುವಾಗಲೇ ಇದೀಗ ಅಂತಹುದೇ ಮತ್ತೊಂದು ನಾಪತ್ತೆ ಘಟನೆ ನಡೆದಿದೆ.   

You cannot copy contents of this page