ಹಿರಿಯ ವ್ಯಾಪಾರಿ, ಕಾರವಲ್ ಏಜೆಂಟ್ ನಿಧನ

ವರ್ಕಾಡಿ: ಬೋರ್ಕಳ ನಿವಾಸಿ ಹಾಗೂ ಬೇಕರಿ ಜಂಕ್ಷನ್‌ನಲ್ಲಿ ವ್ಯಾಪಾರಿಯಾಗಿದ್ದ ವಾಮನ ಬೋರ್ಕಳ (56) ನಿಧನ ಹೊಂದಿ ದರು. ಹೃದಯ ಸಂಬಂಧ ಕಾಯಿಲೆ ಯಿಂದ ಬಳಲುತ್ತಿದ್ದ ಇವರು ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಾ ಗಿದ್ದರು. ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ. ಕಾರವಲ್ ಪತ್ರಿಕೆ ಏಜೆಂಟ್ ಆಗಿದ್ದರು. ವಿವಿಧ ಪತ್ರಿಕೆ ಗಳಿಗೆ ಸ್ಥಳೀಯ ಸುದ್ಧಿಗಳನ್ನು ಬರೆದು ಕಳುಹಿಸುತ್ತಿದ್ದರು. ಯಕ್ಷಗಾನಪ್ರೇಮಿ ಯಾಗಿದ್ದ ಇವರು ಹಲವಾರು ಕಾರ್ಯಕ್ರಮಗಳಿಗೆ ಪ್ರಾಯೋಜ ಕತ್ವ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ  ರಂಗಗಳಲ್ಲೂ ಗುರುತಿಸಿ ಕೊಂಡಿದ್ದರು. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಪ್ರೀತಿಕ, ಕೃತಿಕ, ಸಹೋದರರಾದ ಮಹಾಬಲ ಶೆಟ್ಟಿಗಾರ್ ಬೋರ್ಕಳ, ವಸಂತ ಶೆಟ್ಟಿಗಾರ್ ಬೋರ್ಕಳ, ಸಹೋದರಿ ಯರಾದ ಸರೋಜಿನಿ, ಗೀತ ಹಾಗೂ ಅಪಾರ ಬಂಧು-ಬಳಗ ವನ್ನು ಅಗಲಿದ್ದಾರೆ. ನಿಧನಕ್ಕೆ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

You cannot copy contents of this page