ಗಾಂಜಾ ಪ್ರಕರಣದ ಆರೋಪಿಗೆ ಶಿಕ್ಷೆ

ಕಾಸರಗೋಡು: ಗಾಂಜಾ ಸಾಗಾಟ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ) ನ್ಯಾಯಾಧೀಶರಾದ ರಾಮು ರಮೇಶ್ಚಂದ್ರ ಭಾನು ಒಂದು ವರ್ಷ ಕಠಿಣ ಸಜೆ ಹಾಗೂ 2೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಡಂಬಾರು  ಪತ್ತನಾಡಿ ಸಂತಡ್ಕದ ಅಬ್ದುಲ್ ರಹ್ಮಾನ್ (49) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.

ಜುಲ್ಮಾನೆ ಪಾವತಿಸದಿದ್ದಲ್ಲಿ  ಆರೋಪಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. 2021 ಮಾರ್ಚ್ 19ರಂದು ಇಚ್ಲಂಗೋಡು ಜಂಕ್ಷನ್‌ನಲ್ಲಿ ಅಂದು ಕುಂಬಳೆ  ಠಾಣೆ ಎಸ್‌ಐ ಆಗಿದ್ದ ಎಂ.ಪಿ. ಶಾಜಿ ನೇತೃತ್ವದಲ್ಲಿ ಎಎಸ್‌ಐ ಪ್ರಕಾಶನ್ ಮತ್ತು ಸಿವಿಲ್ ಪೊಲೀಸ್ ಆಫೀಸರ್  ಸುಭಾಷ್‌ರನ್ನೊಳಗೊಂಡ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಆ ದಾರಿಯಾಗಿ ಬಂದ ಆರೋಪಿಯ ಸ್ಕೂಟರ್‌ನ್ನು ಪೊಲೀಸರು ತಡೆದು ನಿಲ್ಲಿಸಿ ತಪಾಸಣೆಗೊಳಪಡಿ ಸಿದಾಗ ಅದರಲ್ಲಿ 1.670 ಕಿಲೋ ಗಾಂಜಾ ಪತ್ತೆಯಾಗಿತ್ತು. ಅದಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿ ದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.

ಅಂದು ಕುಂಬಳೆ   ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ಎಂ. ಅನಿಲ್ ಮತ್ತು ಪಿ. ಪ್ರಮೋದ್ ಈ ಪ್ರಕರಣದ ತನಿಖೆ ನಡೆಸಿದ್ದಾರೆ. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ.ಚಂದ್ರಮೋಹನ್ ಮತ್ತು ನ್ಯಾಯವಾದಿ ಚಿತ್ರಕಲಾ ನ್ಯಾಯಾಲಯದಲ್ಲಿ ವಾದಿಸಿದ್ದರು.

You cannot copy contents of this page