ಸೋಂಕಾಲ್‌ನಲ್ಲಿ ಎನ್‌ಡಿಎ ಚುನಾವಣಾ ಕಚೇರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಂದ ಉದ್ಘಾಟನೆ 16ರಂದು

ಮಂಗಲ್ಪಾಡಿ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಚುನಾವಣಾ ಕಚೇರಿ ಉದ್ಘಾಟನೆ ಈ ತಿಂಗಳ 16ರಂದು ಬೆಳಿಗ್ಗೆ 10.30ಕ್ಕೆ ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲ್‌ನಲ್ಲಿ ನಡೆಯಲಿದೆ. ಕೇಂದ್ರ ಕಾರ್ಮಿಕ, ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವೆ ಹಾಗೂ ಕೇರಳ ವಿಧಾನಸಭಾ ಚುನಾವಣಾ ರಾಜ್ಯ ಸಹ ಪ್ರಭಾರಿ ಶೋಭಾ ಕರಂದ್ಲಾಜೆ ಉದ್ಘಾಟಿಸುವರು. ಕರ್ನಾಟಕ, ಕೇರಳ ರಾಜ್ಯದ ಬಿಜೆಪಿ ಮುಖಂಡರು, ಜಿಲ್ಲಾ ಮಂಡಲ ಪಂಚಾಯತ್ ಮಟ್ಟದ ಮುಖಂಡರು ಭಾಗವಹಿಸುವರು. ಉದ್ಘಾಟನೆಯ ಬಳಿಕ ವಿಧಾನಸಭಾ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಮುಖಂಡ ವಸಂತ ಕುಮಾರ್ ಮಯ್ಯ ತಿಳಿಸಿದ್ದಾರೆ.

You cannot copy contents of this page