ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿಯನ್ ಕಚೇರಿ ಉದ್ಘಾಟನೆ, ಜನಪ್ರತಿನಿಧಿಗಳಿಗೆ ಗೌರವಾರ್ಪಣೆ

ಕಾಸರಗೋಡು:  ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿ ಯನ್ ಕಚೇರಿಯ ಉದ್ಘಾಟನೆ ಹಾಗೂ ಜನಪ್ರತಿನಿಧಿ ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.  ಕೊರಕ್ಕೋಡು ಶ್ರೀ ಆರ್ಯಕಾತ್ಯಾಯಿನಿ ಕ್ಷೇತ್ರ ಸಮೀಪ ಯೂನಿಯನ್ ಕಚೇರಿಯನ್ನು ಯೋಗಂ ಇನ್‌ಸ್ಪೆಕ್ಟಿಂಗ್ ಆಫೀಸರ್ ಪಿ.ಟಿ. ಲಾಲು ಉದ್ಘಾಟಿಸಿ ಮಾತನಾಡಿದರು. ತಳಂಗರೆ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸ್ಥಾನಿಕ ನಾಗೇಶ್ ಕಾರ್ನವರ್, ಪಿಲಿಕುಂಜೆ ಶ್ರೀ ಐವರ್ ಭಗವತೀ ಕ್ಷೇತ್ರದ ಮಂಜು ಕಾರ್ನವರ್ ದೀಪ ಬೆಳಗಿಸಿದರು. ಎಸ್‌ಎನ್‌ಡಿಪಿ ಯೋಗಂ ಯೂನಿಯನ್ ಅಧ್ಯಕ್ಷ ನಾರಾಯಣ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಮುದಾಯ ಸದಸ್ಯರಾದ ಜನಪ್ರತಿನಿಧಿ ಗಳನ್ನು ಗೌರವಿಸಲಾ ಯಿತು.  ವಿವಿಧ ವಲಯಗಳಲ್ಲಿ ಸಾಧನೆಗೈದಿರುವ  ವ್ಯಕ್ತಿಗಳನ್ನು ಹಾಗೂ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾ ಯಿತು. ನಗರಸಭಾ ಕೌನ್ಸಿಲರ್ ಕೆ.ಮಧುಕರ ಮುಖ್ಯ ಅತಿಥಿಯಾಗಿದ್ದರು. ಯೂತ್ ಮೂವ್‌ವೆಂಟ್ ಪದಾಧಿಕಾರಿ ಜೋಷಿ ಕೊಡಕ್ಕಾಡ್, ಯೋಗಂ ಡೈರೆಕ್ಟರ್ ನ್ಯಾಯವಾದಿ ಪಿ.ಕೆ. ವಿಜಯನ್, ಮಹಿಳಾ ಸಂಘದ ಅಧ್ಯಕ್ಷೆ ಸುನಿತಾ ದಾಮೋದರನ್, ಉಪಾಧ್ಯಕ್ಷೆ ಸೌಮ್ಯ, ಕಾರ್ಯದರ್ಶಿ ಮೋಹಿನಿ ಹರೀಶ್ ಮೊದಲಾದವರು ಮಾತನಾಡಿ ದರು. ಎಸ್‌ಎನ್‌ಡಿಪಿ ಯೋಗಂ ಯೂನಿ ಯನ್ ಸೆಕ್ರೆಟರಿ ಗಣೇಶ್ ಪಾರೆಕಟ್ಟೆ ಸ್ವಾಗತಿಸಿ, ಯೂನಿಯನ್ ಉಪಾಧ್ಯಕ್ಷ ಎ.ಟಿ. ವಿಜಯನ್ ವಂದಿಸಿದರು.

You cannot copy contents of this page