ಕಾಸರಗೋಡು ಕೇರಳದ ಸೌರಶಕ್ತಿ ಹಬ್ ಆಗಿ ಬದಲಾಗಲಿದೆ, ಪೆರಡಾಲದಲ್ಲಿ 30 ಮೆಘಾವಾಟ್ ಸೌರಸ್ಥಾವರ ನಿರ್ಮಾಣ- ಮುಖ್ಯಮಂತ್ರಿ

ಕಾಸರಗೋಡು: ಕಾಸರಗೋಡು ಜಿಲ್ಲೆ ಕೇರಳದ ಸೌರಶಕ್ತಿಯ ಹಬ್ ಆಗಿ ಬದಲಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪೆರಡಾಲಲ್ಲಿ 30 ಮೆಘಾವಾಟ್ ಮತ್ತು ಚೀಮೇನಿಯಲ್ಲಿ 80 ಮೆಘಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೌರ ಸ್ಥಾವರಗಳ ನಿರ್ಮಾಣ ಕೆಲಸಗಳ ಉದ್ಘಾಟನೆಯನ್ನು ನಿನ್ನೆ ಚೀಮೇನಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ವಹಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು.

ತೋಟಗಾರಿಕಾ ಇಲಾಖೆಗೆ ಸೇರಿದ 300 ಎಕ್ರೆ ಸ್ಥಳಗಳಲ್ಲಾಗಿ   ಈ ಎರಡು ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರನ್ನು ಕೇಂದ್ರವನ್ನಾಗಿ ಕಾರ್ಯವೆಸಗುತ್ತಿರುವ ನ್ಯಾಚುರಲ್ ಎನರ್ಜಿ ಪ್ರೈವೆಟ್ ಲಿಮಿಟೆಡ್‌ಗೆ ಈ ಎರಡು ಸ್ಥಾವರಗಳ ನಿರ್ಮಾಣದ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಪೈವಳಿಕೆ, ಅಂಬಲತರ ಮತ್ತು ಕರಿಂದಳಂ ಎಂಬೆಡೆಗಳಲ್ಲಿ ಈಗಾಗಲೇ ಮೂರು ಸೌರ ವಿದ್ಯುತ್ ಸ್ಥಾವರಗಳು ಕಾರ್ಯವೆಸಗುತ್ತಿದ್ದು, ಆ ಮೂಲಕ ಕಾಸರಗೋಡು ಜಿಲ್ಲೆ ಇಡೀ ದೇಶಕ್ಕೇ  ಮಾದರಿಯಾಗಿ ಹೊರಹೊಮ್ಮಿದೆ.

ಪೆರಡಾಲದಲ್ಲಿ ನಿರ್ಮಿಸಲಾಗುತ್ತಿ ರುವ ವಿದ್ಯುತ್ ಸ್ಥಾವರದಲ್ಲಿ ಒಟ್ಟಾರೆ ಯಾಗಿ 47 ದಶಲಕ್ಷ ಯೂನಿಟ್ ವಿದ್ಯುತ್ ಹಾಗೂ ಚೀಮೇನಿಯಲ್ಲಿ 125 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆ ಇರಿಸಲಾಗಿದೆ. ಇವುಗಳಲ್ಲಿ ಬ್ಯಾಟರಿ ಸ್ಟೋರೇಜನ್ನು ಒಳಪಡಿಸಿ ಆ ಮೂಲಕ ವಿದ್ಯುತ್ ದಾಸ್ತಾನು ಇರಿಸಿ ವಿದ್ಯುತ್ ಉಪಯೋಗ ಹೆಚ್ಚುವ ಸಮಯಗಳಲ್ಲಿ ನಾಲ್ಕರಿಂದ ಎಂಟು ತಾಸುಗಳ ತನಕ ಇವುಗಳಿಂದ ವಿದ್ಯುತ್ ಸರಬರಾಜು ನಡೆಸುವ ಕ್ರಮವನ್ನು ಕೈಗೊಳ್ಳಲಾಗು ವುದು. ತೋಟಗಾರಿಕಾ ನಿಗಮದ ಭೂಮಿಯಲ್ಲಿ ಪರಿಸರಕ್ಕೆ ಪ್ರತಿಕೂಲಕರ ವಾಗದ ರೀತಿಯಲ್ಲಿ ಈ ಸೌರ ಸ್ಥಾವರ ಗಳನ್ನು ಸ್ಥಾಪಿಸಲಾಗುವುದು. ಇವು 5೦೦ ಕೋಟಿ ರೂ. ವೆಚ್ಚದ ಯೋಜನೆಗಳಾ ಗಿವೆ. 2027ರೊಳಗಾಗಿ ಇದರ ನಿರ್ಮಾಣ ಕೆಲಸಗಳನ್ನು ಪೂರ್ತೀಕರಿಸ ಲಾಗುವುದು. ಈ ಯೋಜನೆಯಲ್ಲಿ 6೦ ಮಂದಿಗೆ ಖಾಯಂ ಉದ್ಯೋಗ ಲಭಿಸಲಿದೆ. ವಿದ್ಯುತ್ ಉತ್ಪಾದನಾ ರಂಗದಲ್ಲಿ ಕೇರಳವನ್ನು ಸಂಪೂರ್ಣ ಸ್ವಾವಲಂಭಿ ರಾಜ್ಯವನ್ನಾಗಿ ಪರಿವರ್ತಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಜೀಮೇನಿ ಪಂ. ಅಧ್ಯಕ್ಷೆ  ಪಿ.ವಿ. ಜಾನಕಿ, ಮಾಹಿನ್ ಸುಬೈರ್ ಮೊದಲಾದವರು ಮಾತನಾಡಿದರು. ಇದರ ಹೊರತಾಗಿ ತೃಕರಿಪುರದಲ್ಲಿ ನಿರ್ಮಿಸಲಾಗಿರುವ ಕಾಸರಗೋಡು ಜಿಲ್ಲಾ ಮಲ್ಟಿ ಪರ್ಪಸ್ ಇಂಡೋರ್ ಕ್ರೀಡಾಂಗಣದ ಉದ್ಘಾಟನೆಯನ್ನು ಮುಖ್ಯಮಂತ್ರಿ ನಿನ್ನೆ ನೆರವೇರಿಸಿದರು. ಕೇರಳದಲ್ಲಿ ಕ್ರೀಡಾ ಆರ್ಥಿಕತೆಗೆ ರೂಪು ನೀಡಲಾಗುವುದು ಮಾತ್ರವಲ್ಲ ನಗರ ಮತ್ತು ಗ್ರಾಮೀಣರಿಗೆ ಕ್ರೀಡಾ ಶಿಕ್ಷಣ ಲಭಿಸುವಂತೆ ಮಾಡಲಾಗುವುದೆಂದು ಅವರು ತಿಳಿಸಿದರು.

RELATED NEWS

You cannot copy contents of this page