ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಜಾತ್ರೆ ನಾಳೆಯಿಂದ

ಕಾಸರಗೋಡು: ಕಾಸರಗೋಡು ನಗರದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಾಳೆಯಿಂದ 23ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ನಾಳೆ ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮ, 9ಕ್ಕೆ ಬಳ್ಳಪದವು ವೀಣಾ ವಾದಿನಿ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, 10.45ರ ನಂತರದ ಮುಹೂರ್ತದಲ್ಲಿ ಪ್ರಾರ್ಥನೆ, ಧ್ವಜಾರೋಹಣ, ಮಧ್ಯಾಹ್ನ 12.05ರಿಂದ ಮಹಾಪೂಜೆ, ಉತ್ಸವ ಬಲಿ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಭಜನೆ, 6ಕ್ಕೆ ತಾಯಂಬಕ, 6.30ರಿಂದ ಭರತನಾಟ್ಯ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ ನಡೆಯಲಿದೆ. 20ರಂದು ಬೆಳಿಗ್ಗೆ 7ಕ್ಕೆ ಉಷಃಪೂಜೆ, ಉತ್ಸವಬಲಿ, 9ರಿಂದ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಉತ್ಸವಬಲಿ, ಸಂಜೆ 5ರಿಂದ ಭಜನೆ, 6ಕ್ಕೆ ತಾಯಂಬಕ, 6.30ರಿಂದ ಸಂಗೀತನೃತ್ಯ, ರಾತ್ರಿ 8.30ಕ್ಕೆ ರಂಗಪೂಜೆ, ರಾತ್ರಿ ಪೂಜೆ, ಉತ್ಸವಬಲಿ ನಡೆಯಲಿದೆ.
21ರಂದು ಬೆಳಿಗ್ಗೆ 7ಕ್ಕೆ ಉಷಃ ಪೂಜೆ, ಉತ್ಸವಬಲಿ, 10ಕ್ಕೆ ಭಜನೆ, ಮಧ್ಯಾಹ್ನ 12ಕ್ಕೆ ಮಹಾ ಪೂಜೆ, ಉತ್ಸವಬಲಿ, ಸಂಜೆ 5ಕ್ಕೆ ಭಜನೆ, 6ಕ್ಕೆ ತಾಯಂಬಕ, 6.30 ರಿಂದ ಭಕ್ತಿ ರಸಮಂಜರಿ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ, ಕಟ್ಟೆಪೂಜೆ, ನಡುದೀಪೋತ್ಸವ ನಡೆಯಲಿದೆ.
22ರಂದು ಬೆಳಿಗ್ಗೆ 5.30ಕ್ಕೆ ಪ್ರತಿ ತಿಂಗಳ ಶುಕ್ಲ ಪಕ್ಷದ ಚತುರ್ಥಿ ದಿನದ ಗಣಪತಿಹೋಮ, 7ಕ್ಕೆ ಉಷಃಪೂಜೆ, ಉತ್ಸವಬಲಿ, 10ಕ್ಕೆ ಸಂಗೀತ ಕಛೇರಿ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಉತ್ಸವಬಲಿ, ಸಂಜೆ 5ಕ್ಕೆ ಭಜನೆ, 6ಕ್ಕೆ ತಾಯಂಬಕ, 6.30ರಿಂದ ನೃತ್ಯಸಂಧ್ಯಾ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ, ಕಟ್ಟೆಪೂಜೆ ಮತ್ತು ಕರಂದಕ್ಕಾಡ್ ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, ಉತ್ಸವ ಮತ್ತು ಶ್ರೀ ದೇವರ ಶಯನ ನಡೆಯಲಿದೆ. 23ರಂದು ಬೆಳಿಗ್ಗೆ 9.10ರಿಂದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ಶಯನೋದ್ಘಾಟನೆ, ಮಹಾಭಿಷೇಕ, ಮಹಾಪೂಜೆ, 10ಕ್ಕೆ ಭಜನೆ, 11ರಿಂದ ತುಲಾಭಾರಸೇವೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಉತ್ಸವಬಲಿ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಭಜನೆ, 6ಕ್ಕೆ ತಾಯಂಬಕ, 6.30ರಿಂದ ಗೀತಾ-ಸಾಹಿತ್ಯ-ಸಂಭ್ರಮ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರಸಾದ ಸ್ವೀಕಾರ, ಧ್ವಜಾವರೋ ಹಣ, 9.30ಕ್ಕೆ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. ಮಾರ್ಚ್ 28ರಂದು ಸಂಜೆ ಶ್ರೀ ಕ್ಷೇತ್ರದಲ್ಲಿ ರಕ್ತೇಶ್ವರಿ ನೇಮ ಮತ್ತು ರಾತ್ರಿ ಗುಳಿಗನ ಕೋಲ ನಡೆಯಲಿದೆ.

RELATED NEWS

You cannot copy contents of this page