ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಶ್ರೀಕಾಂತ್ ಕಾಸರಗೋಡು ಆಯ್ಕೆ

ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿ ಛಾಯಾಗ್ರಾಹಕ ಶ್ರೀಕಾಂತ್ ಕಾಸರಗೋಡುರಿಗೆ ಲಭಿಸಿದೆ. ಎಪ್ರಿಲ್ 11, 12ರಂದು ಬೀದರ್‌ನಲ್ಲಿ ನಡೆಯಲಿರುವ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಶ್ರೀಕಾಂತ್‌ರ ಛಾಯಾಚಿತ್ರ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಘಟಕದ ಮಾಜಿ ಅಧ್ಯಕ್ಷ, ಈಸ್ಟ್ ಘಟಕದ ಕೋಶಾಧಿಕಾರಿಯಾಗಿ, ಕೇರಳ ಸರಕಾರದ ವಾರ್ತಾ ಇಲಾಖೆಯ ಜಿಲ್ಲಾಕೇಂದ್ರದ ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರನ್ನು  ಕಾಸರಗೋಡು ಮತ್ತು ದ.ಕ. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.

RELATED NEWS

You cannot copy contents of this page