ರಾಜ್ಯ ಶಾಲಾ ಕಲೋತ್ಸವ: ಚಿನ್ನದ ಕಪ್ ಮೊಗ್ರಾಲ್‌ನಿಂದ ಪ್ರಯಾಣ ಆರಂಭ

ಕಾಸರಗೋಡು: ರಾಜ್ಯ ಶಾಲಾ ಕಲೋತ್ಸವದ  ಚಿನ್ನದ ಕಪ್ ಪ್ರಯಾಣ ಇಂದು ಬೆಳಿಗ್ಗೆ ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಿಂದ ಆರಂಭಗೊಂಡಿತು.  ಶಾಸಕ ಎ.ಕೆ.ಎಂ.ಅಶ್ರಫ್ ಪ್ಲಾಗ್ ಆಫ್ ನಡೆಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಉಪಾಧ್ಯಕ್ಷೆ ಬಲ್ಕೀಸ್, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಡಿಡಿಇ ಇನ್‌ಚಾರ್ಜ್ ಸತ್ಯಭಾಮ, ಉದಯ ಕುಮಾರಿ, ಬಿಇಒ ಅನಿತಾ, ಪ್ರಾಂಶುಪಾಲ ಬಿನಿ ವಿ.ಎಸ್, ಮುಖ್ಯೋಪಾಧ್ಯಾಯ ಜಯರಾಂ,ವಾರ್ಡ್ ಪ್ರತಿನಿಧಿ  ಜಮೀಲಾ ಹಸನ್, ಪಿಟಿಎ ಅಧ್ಯಕ್ಷ ಲತೀಫ್ ಕೊಪ್ಪಳಂ ಸಹಿತ ಹಲವರು ಭಾಗವಹಿಸಿದರು.  ಚೆಮ್ನಾಡ್ ಸಿಜೆಎಸ್‌ಎಸ್‌ನಲ್ಲಿ ನಡೆದ ಸ್ವಾಗತ ಕಾರ್ಯಕ್ರಮವನ್ನು ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸಿದರು. ಮೆನೇಜರ್ ಸಿ.ಟಿ.ಅಹಮ್ಮದಾಲಿ, ಚೆಮ್ನಾಡ್ ಪಂ. ಅಧ್ಯಕ್ಷೆ ಆಯಿಶಾ ಅಬೂಬಕರ್ ಭಾಗವಹಿಸಿದರು.  ಬಳಿಕ ಹೊಸದುರ್ಗ ಜೆಎಚ್‌ಎಸ್‌ಎಸ್‌ಗೆ ತಲುಪಿದ್ದು ಅಲ್ಲಿಂದ ಪಯ್ಯನ್ನೂರು, ಕರಿವೆಳ್ಳೂರು ಮೂಲಕ ಸಾಗಿ ಜಿಲ್ಲೆಯ ಗಡಿ ದಾಟಿದೆ. ಇಂದಿನ ಪ್ರಯಾಣ ಕಲ್ಲಿಕೋಟೆಯಲ್ಲಿ ಸಮಾಪ್ತಿಗೊಳ್ಳಲಿದ್ದು, ಇದೇ ರೀತಿ ರಾಜ್ಯದ 36 ಕೇಂದ್ರಗಳಲ್ಲಿ ಸ್ವಾಗತ ಸ್ವೀಕರಿಸಿ ಚಿನ್ನದ ಕಪ್ 13ರಂದು ಸಂಜೆ 6 ಗಂಟೆಗೆ ತೇಕಿನ್‌ಕ್ಕಾಡ್ ಮೈದಾನದಲ್ಲಿ ಸಜ್ಜಾಗುವ ಪ್ರಧಾನ ವೇದಿಕೆಗೆ ತಲುಪಲಿದೆ. ೧೪ರಿಂದ ಶಾಲಾ ಕಲೋತ್ಸವ ಆರಂಭಗೊಳ್ಳುವುದು.

You cannot copy contents of this page