ಮಂಜೇಶ್ವರ: ಶಾಸಕ ಎಕೆಎಂ ಅಶ್ರಫ್‌ರ ಮತಗಳ್ಳತನದ ಆರೋಪ ಸೋಲಿನ ಭಯದಿಂದ ಕೂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮತದಾರರ ಯಾದಿಯಿಂದ ನಕಲಿ ಮತದಾರರನ್ನು ತೆಗೆದು ಹಾಕಲು ಸಲ್ಲಿಸಲಾದ ಅರ್ಜಿಗಳ ಕುರಿತು ಜಿಲ್ಲಾಧಿಕಾರಿ ತನ್ನ ನಿಲುವನ್ನು ಸ್ಪಷ್ಟಪಡಿಸಿ ದ್ದಾರೆ. ನಕಲಿ ಹೆಸರುಗಳನ್ನು ತೆಗೆದು ಹಾಕಲು ಅರ್ಜಿ ಸಲ್ಲಿಸಿದ ಬಿಜೆಪಿ ಮುಖಂಡ ನನ್ನು ಶಾಸಕರು ಬೆದರಿಸಲು ಯತ್ನಿಸುತ್ತಿದ್ದಾರೆ ಎಂದು ಅಶ್ವಿನಿ ದೂರಿದ್ದಾರೆ. ಮತದಾರರ ಯಾದಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸುವ ರೀತಿಯಲ್ಲೇ ಅನರ್ಹರನ್ನು ತೆಗೆದು ಹಾಕಲು ಅರ್ಜಿ ಸಲ್ಲಿಸುವುದು ಕೂಡಾ ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ. ನಕಲಿ ಮತದಾರರ ಮತ ಗಳಿಸಿ ಮುಸ್ಲಿಂ ಲೀಗ್ ಇದುವರೆಗಿನ ಚುನಾವಣೆಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಅಶ್ವಿನಿ ಆರೋಪಿಸಿದರು.







