ಕಾಸರಗೋಡು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ 10ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಳು. ಕುಣಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಮೆಹಸಿನ್ (15) ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟವಳು. 3 ತಿಂಗಳ ಹಿಂದೆ ಹೊಟ್ಟೆನೋವು ತಗಲಿದ ಈಕೆಗೆ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ತಿರುವನಂತಪುರ ಸಹಿತದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯಗೊಳಿಸಲಾಯಿತಾದರೂ ರೋಗ ವಾಸಿಯಾಗಲಿಲ್ಲ. ಕುಣಿಯದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮಜೀದ್- ರಸಿಯ ದಂಪತಿ ಪುತ್ರಿಯಾಗಿದ್ದಾಳೆ. ಮೃತಳು ತಂದೆ, ತಾಯಿ, ಸಹೋದರ ಕೆ.ಎಂ. ಅಬ್ದುಲ್ ರಶೀದ್, ಸಹೋದರಿ ಕೆ.ಎಂ. ಫಾತಿಮತ್ ರುಮಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.






