ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪೈವಳಿಕೆ ಮತ್ತು ಮೀಂಜ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಮತದಾರರನ್ನು ಭೇಟಿಯಾಗಿ ಮತ ಯಾಚಿಸಿದರು. ಕುರುಡಪದವಿನಿಂದ ಆರಂಭಗೊಂಡ ಪರ್ಯಟನೆ ಮಧ್ಯಾಹ್ನ ದುರ್ಗಿಪಳ್ಳ ಬಳಿಕ ಸಂಜೆ ಚೇವಾರಿನಲ್ಲಿ ಕೊನೆಗೊಂಡಿತು. ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ವಿವಿಧ ಕಡೆಗಳ ಕಾರ್ಯಕ್ರಮಗಳಲ್ಲಿ ಈ ಮಧ್ಯೆ ಅವರು ಭಾಗವಹಿಸಿದರು. ಇಂದು ಮಧ್ಯಾಹ್ನವರೆಗೆ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲೂ, ಆ ಬಳಿಕ ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಪರ್ಯಟನೆ ನಡೆಸುವರು.






