ಕಾಸರಗೋಡು: ಕಾಸರಗೋಡು ಭಾಗದಿಂದ ಕಣ್ಣೂರಿನತ್ತ ಸಿಮೆಂಟ್ ಮಿಶ್ರಣದೊಂದಿಗೆ ಸಾಗುತ್ತಿದ್ದ ಟ್ಯಾಂಕರ್ ಲಾರಿ ಚೆರ್ಕಳಕ್ಕೆ ಸಮೀಪದ ಬೇವಿಂಜೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನಿಯಂ ತ್ರಣ ತಪ್ಪಿ ಮಗುಚಿ ಬಿದ್ದು, ಈ ವೇಳೆ ಅದರ ಕ್ಯಾಬಿನ್‌ನೊಳಗೆ ಸಿಲುಕಿಕೊಂ ಡಿದ್ದ ಚಾಲಕನನ್ನು ಕಾಸರಗೋಡು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಡೆದಿದೆ. ತಮಿಳುನಾಡು ನಿವಾಸಿ ಸಿದ್ದಿಕ್(42) ಎಂಬವರು ಕ್ಯಾಬಿನ್‌ನಲ್ಲಿ ಸಿಲುಕಿಕೊಂಡ ಚಾಲಕನಾಗಿದ್ದಾರೆ.
ನಿನ್ನೆ ಸಂಜೆ ಈ ಅಪಘಾತ ಸಂಭವಿಸಿದೆ. ವಿಷಯ ತಿಳಿದು ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿ.ಸಿ. ಮೊಹಮ್ಮದ್ ಸಿರಾಜುದ್ದೀನ್, ಅತುಲ್ ರವಿ ಇ. ಪ್ರಸೀದ್ (ಎಫ್‌ಆರ್‌ಒ- (ಡಿ) ಎ.ಕೆ. ಶೈಜು, ಹೋಮ್‌ಗಾರ್ಡ್‌ಗಳಾದ ಎನ್.ಪಿ. ರಾಗೇಶ್, ವಿ. ರಾಜು ಮತ್ತು ಶ್ರೀಜಿತ್ ಎಂಬವರನ್ನೊಳಗೊಂಡ ಕಾಸರಗೋಡು ಅಗ್ನಿಶಾಮಕ ದಳದವರು ತುರ್ತಾಗಿ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಹೈಡ್ರೋಕಟ್ಟರ್ ಉಪಯೋಗಿಸಿ ಟ್ಯಾಂಕರ್ ಲಾರಿಯ ಕ್ಯಾಬಿನ್‌ನ್ನು ಒಡೆದು ಅದರೊಳಗೆ ಸಿಲುಕಿಕೊಂಡಿದ್ದ ಚಾಲಕ ಸಿದ್ದೀಕ್‌ನನ್ನು ಸಾಹಸಿಕವಾಗಿ ಹೊರತೆಗೆದು ಆಸ್ಪತ್ರೆಗೆ ಸಾಗಿಸಿ ಅವರ ಪ್ರಾಣ ರಕ್ಷಿಸಿದರು.






