ಕಾಸರಗೋಡು: ಅಭಿಭಾಷಕ ಪರಿಷತ್ ಜಿಲ್ಲಾ ಸಮಿತಿ ಆಶ್ರಯ ದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯಕ್ಕಾಗಿ ಅಭಿಭಾಷಕ ಒಕ್ಕೂಟ ನಡೆಸಲಾಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.
ಅಭಿಭಾಷಕ ಪರಿಷತ್ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ ಬಿ. ರವೀಂದ್ರನ್, ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ನ್ಯಾಯವಾದಿ ಪಿ. ಮರಳೀಧರನ್ ಮಾತನಾಡಿದರು. ನ್ಯಾಯವಾದಿ ಅನಿಲ್ ಕೆ.ಜಿ. ಸ್ವಾಗತಿಸಿ, ನ್ಯಾಯವಾದಿ ಎ. ಮಣಿಕಂಠನ್ ವಂದಿಸಿದರು.






