ಕಾಸರಗೋಡು: ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪಾಲಕ್ಕಾಡ್ನ ಚಿಟ್ಟೂರು ಆಯುರೂರು ಕೊಳಕ್ಕರೆಪರಂಬಿಲ್ ನಿವಾಸಿ ಜಲೀಲ್ ಯಾನೆ ಶಟ್ಟರ್ ಜಲೀಲ್ (36), ಈತನ ಸಹಚರ ಆಲಂಪಾಡಿಯ ಅಬ್ದುಲ್ ಲತೀಫ್ (46) ಎಂಬಿವರನ್ನು ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್, ಎಸ್ಐ ಅಖಿಲ್, ಎಎಸ್ಐ ಪ್ರಸಾದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಜಲೀಲ್ ಕಾಸರಗೋಡಿನಲ್ಲಿ ವಾಸಿಸಿ ಕರ್ನಾಟಕದಲ್ಲಿ ಕೋಳಿ ಫಾರ್ಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಈಮಧ್ಯೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಿಂದ ಬೆಲೆಬಾಳುವ ಸೊತ್ತುಗಳನ್ನು ಕಳವುಗೈದ ಪ್ರಕರಣದಲ್ಲಿ ಈತನನ್ನು ಸೆರೆಹಿಡಿಯಲಾಗಿದೆ. ಈತ ಕಳವು ಗೈದ ಸೊತ್ತುಗಳನ್ನು ಮಾರಾಟ ಗೈಯ್ಯುತ್ತಿದ್ದುದು ಆಲಂಪಾಡಿಯ ಲತೀಫ್ ಆಗಿದ್ದಾನೆ. ಈ ಇಬ್ಬರು ಜೈಲಿನಲ್ಲಿ ಪರಸ್ಪರ ಪರಿಚಯಗೊಂಡು ಕಳವು ಕೃತ್ಯದಲ್ಲಿ ತೊಡಗಿಕೊಂ ಡಿದ್ದರು. ಜಲೀಲ್ ವಿರುದ್ಧ ರಾಜ್ಯದ ವಿವಿಧೆಡೆಗಳಲ್ಲಾಗಿ 72 ಕಳವು ಕೇಸುಗಳು ದಾಖಲಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ.






