ಜಿಲ್ಲೆಯಲ್ಲಿ ಗೃಹಿಣಿ ಸಹಿತ ಮೂವರು ಯುವತಿಯರು ನಾಪತ್ತೆ

ಕಾಸರಗೋಡು: ಜಿಲ್ಲೆಯಲ್ಲಿ  ಕಳೆದದಿನ ಗೃಹಿಣಿ ಸಹಿತ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವೆ ಪ್ರಿಯತಮನನ್ನು ಮದುವೆಯಾದ ಬಳಿಕ ಪೊಲೀಸ್ ಠಾಣೆಯಲ್ಲಿಹಾಜರಾಗಿದ್ದಾಳೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋಂ ಅದಿರುಮಾವಿನ ಪಿ.ಕೆ. ಮಧು ಎಂಬವರ ಪುತ್ರಿ ಬೀನಾ (19) ಪ್ರಿಯತಮನಾದ ರಂಜಿತನ ಜೊತೆ ಪರಾರಿಯಾಗಿ ಮದುವೆಯಾಗಿದ್ದಾಳೆ. ಮಂಗಳವಾರ ಸಂಜೆ ಬೀನಾ ನಾಪತ್ತೆಯಾಗಿದ್ದಳು. ತಂದೆ ನೀಡಿದ ದೂರಿನಂತೆ  ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ನಿನ್ನೆ ಮಧ್ಯಾಹ್ನ ಬೀನಾ ಪೊಲೀಸ್ ಠಾಣೆಗೆ ತಲುಪಿದ್ದಾಳೆ. ಜೊತೆಗೆ ಪ್ರಿಯತಮ ರಂಜಿತ್ ಕೂಡಾ ಇದ್ದನು. ಕ್ಷೇತ್ರವೊಂದರಲ್ಲಿ ಮದುವೆಯಾಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಯುವತಿಯನ್ನು ಸ್ವ ಇಚ್ಛೆ ಪ್ರಕಾರ ಬಿಟ್ಟಿದ್ದು, ಇ35೩೫) ಇಬ್ಬರು ಮಕ್ಕಳನ್ನು ಉಪೇಕ್ಷಿಸಿ ಹಾಸನ ನಿವಾಸಿಯಾದ ಪ್ರಿಯತಮ ಹರೀಶ್‌ನ ಜೊತೆ ತೆರಳಿದ್ದಾಳೆ. ಕಳೆದ ದಿನ ಸುಳ್ಯದ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಪ್ರೇಮ ಮನೆಯಿಂದ ತೆರಳಿದ್ದಳು. ಬಳಿಕ ಮರಳಿ ಬಂದಿರಲಿಲ್ಲ. ಈ ಬಗ್ಗೆ ತಾಯಿ ಲಲಿತ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಪ್ರೇಮ ಮನೆಗೆ ಫೋನ್ ಕರೆ ಮಾಡಿ ತಾನು ಹರೀಶ್‌ನ ಜೊತೆ ಇರುವುದಾಗಿ ತಿಳಿಸಿದ್ದಾಳೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚಮ್ಮಟಂವಯಲ್ ಪುದಿಯಪುರೈಕಲ್‌ನ  ಸುನಿಲ್ ಲಾರೆನ್ಸ್ ಎಂಬವರ ಪುತ್ರಿ ಅಲಿನ (22) ನಿನ್ನೆ ನಾಪತ್ತೆಯಾಗಿದ್ದಾಳೆ.  ಕೆಲಸಕ್ಕೆಂದು ತಿಳಿಸಿ ನಿನ್ನೆ ಮನೆಯಿಂದ ಹೋದ ಅಲೀನ ಮರಳಿ ಬಂದಿಲ್ಲವೆಂದೂ ಪಾಲಕ್ಕಾಡ್ ನಿವಾಸಿಯಾದ ಸಂದೀಪ್ ಎಂಬಾತನೊಂದಿಗೆ ಹೋಗಿರುವುದಾಗಿ ಸಂಶಯಿಸಲಾಗುತ್ತಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page