ಮುಳ್ಳೇರಿಯ: ಯುವತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆದೂರು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅಡೂರು ಪಾಂಡಿ ಬಳವಂತಡ್ಕದ ಅನುಂಜ ಕೆ. (18) ಎಂಬವರು ಈ ದೂರು ನೀಡಿದ್ದು, ಅದರಂತೆ ಬಳವಂತಡ್ಕದ ಶಂಕರನ್ ವಿ. ಎಂಬವರ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಬಳವಂತಡ್ಕ ಸೇತುವೆ ಬಳಿ ಆರೋಪಿ ತನ್ನ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.